ಮುಂಬೈ: ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರುವ ನಿರ್ಣಾಯಕ ಹಂತದಲ್ಲಿದೆ. ಈ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ನಮ್ಮ ಬೆಂಬಲ ಮುಂಬೈ ಇಂಡಿಯನ್ಸ್ ಗೆ ಎಂದಿದ್ದಾರೆ!
ಇದಕ್ಕೆ ಕಾರಣವೂ ಇದೆ. ಗುಜರಾತ್ ವಿರುದ್ಧ ಭರ್ಜರಿ ಗೆಲುವು ಕಂಡ ಆರ್ ಸಿಬಿ ಪ್ಲೇ ಆಫ್ ಆಸೆ ಜೀವಂತವಾಗಿಟ್ಟಿದೆ. ಇದೀಗ ಆರ್ ಸಿಬಿ ಪ್ಲೇ ಆಫ್ ಹಂತಕ್ಕೇರಬೇಕಾದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕು.
ಹೀಗಾಗಿ ಕೊಹ್ಲಿ ತಮಾಷೆಯಾಗಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮುಂಬೈ ಇಂಡಿಯನ್ಸ್ ಗೆ ಮುಂದಿನ ಪಂದ್ಯದಲ್ಲಿ 25 ಮಂದಿ ಹೆಚ್ಚು ಬೆಂಬಲಿಗರಿರುತ್ತಾರೆ ಎಂದಿದ್ದಾರೆ.