Select Your Language

Notifications

webdunia
webdunia
webdunia
Sunday, 6 April 2025
webdunia

ಗಂಗೂಲಿ ಆಟಗಾರರ ಕೈ ಬಿಡುತ್ತಿರಲಿಲ್ಲ, ಕೊಹ್ಲಿ ಸಪೋರ್ಟ್ ಮಾಡ್ತಿದ್ದರಾ ಎನ್ನುವುದು ಡೌಟು ಎಂದ ಸೆಹ್ವಾಗ್

ವೀರೇಂದ್ರ ಸೆಹ್ವಾಗ್
ಮುಂಬೈ , ಗುರುವಾರ, 19 ಮೇ 2022 (16:50 IST)
ಮುಂಬೈ: ಟೀಂ ಇಂಡಿಯಾ ನಾಯಕರಾಗಿದ್ದಾಗ ಸೌರವ್ ಗಂಗೂಲಿ ತಮ್ಮ ತಂಡದ ಆಟಗಾರರನ್ನು ಸದಾ ಬೆಂಬಲಿಸುತ್ತಿದ್ದರು. ಆದರೆ ಕೊಹ್ಲಿ ಹಾಗೆ ಮಾಡುತ್ತಿದ್ದರೇ ಎನ್ನುವುದು ಸಂಶಯ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಸೆಹ್ವಾಗ್ ಹೇಳಿಕೆ ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುವ ಎಲ್ಲಾ ಸಾಧ‍್ಯತೆಗಳಿವೆ.  ಸಂದರ್ಶನವೊಂದರಲ್ಲಿ ಸೆಹ್ವಾಗ್ ನೇರವಾಗಿ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.

‘ಗಂಗೂಲಿ ಹೊಸ ತಂಡವನ್ನು ಕಟ್ಟಿದರು, ಹೊಸಾಆಟಗಾರರನ್ನು ಕರೆತಂದರು, ಅವರನ್ನು ಸದಾ ಬೆಂಬಲಿಸಿದರು. ಆದರೆ ಕೊಹ್ಲಿ ತಮ್ಮ ಅವಧಿಯಲ್ಲಿ ಹಾಗೆ ಮಾಡಿದ್ದಾರೆಯೇ ಎನ್ನುವುದು ಅನುಮಾನ. ನನ್ನ ಪ್ರಕಾರ ಒಬ್ಬ ಉತ್ತಮ ನಾಯಕ ಹೊಸ ಆಟಗಾರರನ್ನು ತಂಡಕ್ಕೆ ಕರೆತರಬೇಕು, ಅವರ ಬೆನ್ನುಲುಬಾಗಿ ನಿಲ್ಲಬೇಕು. ಆದರೆ ಕೊಹ್ಲಿ ಕೆಲವರನ್ನು ಬೆಂಬಲಿಸಿದರು. ಮತ್ತೆ ಕೆಲವರನ್ನು ಬೆಂಬಲಿಸಲಿಲ್ಲ’ ಎಂದಿದ್ದಾರೆ. ಅವರ ಈ ಮಾತು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಹೊಸ ಇತಿಹಾಸ ಬರೆದ ಕೆಎಲ್ ರಾಹುಲ್-ಡಿ ಕಾಕ್ ಜೋಡಿ