Select Your Language

Notifications

webdunia
webdunia
webdunia
webdunia

ಐಪಿಎಲ್ ರದ್ದಾಗಿದ್ದಕ್ಕೆ ಈ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಖುಷಿಯೋ ಖುಷಿ

ಐಪಿಎಲ್ ರದ್ದಾಗಿದ್ದಕ್ಕೆ ಈ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಖುಷಿಯೋ ಖುಷಿ
ಮುಂಬೈ , ಗುರುವಾರ, 6 ಮೇ 2021 (09:16 IST)
ಮುಂಬೈ: ಐಪಿಎಲ್ ರದ್ದಾಯಿತೆಂದು ಹೆಚ್ಚಿನ ಕ್ರಿಕೆಟಿಗರು ಬೇಸರಪಟ್ಟಿರಬಹುದು. ಆದರೆ ಟೀಂ ಇಂಡಿಯಾದ ಈ ಇಬ್ಬರು ಕ್ರಿಕೆಟಿಗರು ಮಾತ್ರ ಖುಷಿಪಟ್ಟಿರುತ್ತಾರೆ.


ಅವರು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಐಯರ್. ರಾಹುಲ್ ಐಪಿಎಲ್ 14 ರ ಅರ್ಧದಲ್ಲೇ ಅಪೆಂಡಿಸೈಟಿಸ್ ಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ಅವರು ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿತ್ತು. ಹೀಗಾಗಿ ಐಪಿಎಲ್ ರದ್ದಾಗಿರುವುದು ಅವರಿಗೆ ಅನುಕೂಲವೇ ಆಯ್ತು.

ಅತ್ತ, ಶ್ರೇಯಸ್ ಐಯರ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರಿಂದ ಈ ಇಡೀ ಐಪಿಎಲ್ ಕೂಟವನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ಈಗ ಐಪಿಎಲ್ ಮುಂದೂಡಿಕೆಯಾಗಿರುವುದರಿಂದ ಅವರಿಗೂ ಲಾಭವಾಗಿದೆ. ಹೀಗಾಗಿ ಅಭಿಮಾನಿಗಳು ಈ ಇಬ್ಬರೂ ಐಪಿಎಲ್ ರದ್ದಾಗಿದ್ದಕ್ಕೆ ಖುಷಿ ಅನುಭವಿಸುತ್ತಿರಬಹುದು ಎಂದು ಮೆಮೆಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಟಿ20 ವಿಶ್ವಕಪ್ ಜುಲೈನಲ್ಲಿ ನಿರ್ಧಾರ