Publish Date: Thu, 06 May 2021 (08:58 IST)
Updated Date: Thu, 06 May 2021 (09:00 IST)
ಮುಂಬೈ: ಐಪಿಎಲ್ 14 ಅಮಾನಾತುಗೊಂಡ ಬೆನ್ನಲ್ಲೇ ವಿದೇಶೀ ಆಟಗಾರರಿಗೆ ತವರಿಗೆ ತೆರಳುವ ಚಿಂತೆ ಶುರುವಾಗಿದೆ. ಈ ನಡುವೆ 8 ಇಂಗ್ಲೆಂಡ್ ಕ್ರಿಕೆಟಿಗರು ತವರು ಸೇರಿದ್ದಾರೆ.
ಈಗಾಗಲೇ 8 ಮಂದಿ ಇಂಗ್ಲೆಂಡ್ ಕ್ರಿಕೆಟಿಗರನ್ನು ಬಿಸಿಸಿಐ ಇಂಗ್ಲೆಂಡ್ ಗೆ ರವಾನಿಸಿದೆ. ಇನ್ನೂ ಇಯಾನ್ ಮೋರ್ಗನ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್ ನಾಳೆ ಇಂಗ್ಲೆಂಡ್ ವಿಮಾನವೇರಲಿದ್ದಾರೆ.
ಐಪಿಎಲ್ ರದ್ದಾದ ತಕ್ಷಣವೇ ವಿದೇಶೀ ಆಟಗಾರರಿಗೆ ತವರು ದೇಶಕ್ಕೆ ತೆರಳುವ ಚಿಂತೆ ಶುರುವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅವರಿಗೆ ನೆರವಾಗುತ್ತಿದೆ. ಆದರೆ ಆಸೀಸ್ ಆಟಗಾರರ ಸ್ಥಿತಿ ಮಾತ್ರ ಅತಂತ್ರವಾಗಿದೆ.