Select Your Language

Notifications

webdunia
webdunia
webdunia
webdunia

ಬಯೋಬಬಲ್ ನಲ್ಲಿದ್ದರೂ ಐಪಿಎಲ್ ಕ್ರಿಕೆಟಿಗರಿಗೆ ಕೊರೋನಾ ತಗುಲಿದ್ದು ಹೇಗೆ?

ಬಯೋಬಬಲ್ ನಲ್ಲಿದ್ದರೂ ಐಪಿಎಲ್ ಕ್ರಿಕೆಟಿಗರಿಗೆ ಕೊರೋನಾ ತಗುಲಿದ್ದು ಹೇಗೆ?
ಮುಂಬೈ , ಗುರುವಾರ, 6 ಮೇ 2021 (08:52 IST)
ಮುಂಬೈ: ಕೊರೋನಾ ನಡುವೆಯೂ ಐಪಿಎಲ್ ನಡೆಸಲು ಬಿಸಿಸಿಐ ಭಾರೀ ತಯಾರಿ ನಡೆಸಿತ್ತು. ಕ್ರಿಕೆಟಿಗರಿಗೆ ಕಠಿಣ ಬಯೋ ಬಬಲ್ ವಾತಾವರಣವನ್ನೂ ಸೃಷ್ಟಿಸಿತ್ತು. ಹಾಗಿದ್ದರೂ ಐಪಿಎಲ್ ಕ್ರಿಕೆಟಿಗರಿಗೆ ಕೊರೋನಾ ತಗುಲಿದ್ದು ಹೇಗೆ?


ಈ ಬಗ್ಗೆ ಈಗ ಬಿಸಿಸಿಐನಲ್ಲಿ ಚರ್ಚೆ ನಡೆಯುತ್ತಿದೆ. ಆಟಗಾರರಿಗೆ ಹೊರಗೆ ಹೋಗಲು ಅಥವಾ ಹೊರಗಿನವರನ್ನು ಭೇಟಿಯಾಗಲೂ ಅವಕಾಶವಿರಲಿಲ್ಲ. ಹೀಗಿದ್ದಾಗಲೂ ಕೊರೋನಾ ತಗುಲಲು ಕಾರಣವೇನು ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.

ಕೊರೋನಾ ಎರಡನೇ ಅಲೆ ಗಾಳಿಯಲ್ಲೂ ಹರಡುತ್ತಿರಬೇಕು. ಇದೇ ಕಾರಣಕ್ಕೆ ಕ್ರಿಕೆಟಿಗರಿಗೆ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಅದರ ಹೊರತಾಗಿ ಕಳೆದ ಕೆಲವು ದಿನಗಳಿಂದ ಹೊರಗಿನಿಂದ ಆಹಾರ ಕೂಡಾ ನಿಷೇಧಿಸಲಾಗಿತ್ತು. ಗಾಳಿಯಲ್ಲಿ ಹರಡದ ವಿನಹ ಆಟಗಾರರಿಗೆ ಸೋಂಕು ತಗುಲುವ ಅವಕಾಶವೇ ಇರಲಿಲ್ಲ ಎಂಬುದು ಬಿಸಿಸಿಐ ಮೂಲಗಳ ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಆಡಿದ ಮತ್ತಿಬ್ಬರು ಕ್ರಿಕೆಟಿಗರಿಗೆ ಕೊರೋನಾ