ಐಪಿಎಲ್ ಗೆ ಸುರೇಶ್ ರೈನಾ ಬ್ಯಾಟ್ ಖರೀದಿ ಬಲು ಜೋರು

Webdunia
ಬುಧವಾರ, 3 ಮಾರ್ಚ್ 2021 (09:49 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಕ್ರಿಕೆಟಿಗ ಸುರೇಶ್ ರೈನಾ ಈಗ ಮುಂದಿನ ಐಪಿಎಲ್ ಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ.


ಐಪಿಎಲ್ ಗೆ ಚೆನ್ನೈ ತಂಡ ಮುಂದಿನ ವಾರದಿಂದ ತವರಿನಲ್ಲಿ ಕ್ಯಾಂಪ್ ಆಯೋಜಿಸುತ್ತಿದ್ದು, ಅಭ್ಯಾಸಕ್ಕೆ ಧೋನಿಯೇ ನೇತೃತ್ವ ವಹಿಸಲಿದ್ದಾರೆ. ಈ ತರಬೇತಿ ಶಿಬಿರದಲ್ಲಿ ಸುರೇಶ್ ರೈನಾ ಕೂಡಾ ಭಾಗಿಯಾಗಲಿದ್ದಾರೆ.

ಹೀಗಾಗಿ ಈ ತರಬೇತಿ ಶಿಬಿರಕ್ಕೆ ಮುನ್ನ ರೈನಾ ಎಸ್ ಜಿ ಫ್ಯಾಕ್ಟರಿಗೆ ಭೇಟಿ ನೀಡಿ ಹೊಸ ಬ್ಯಾಟ್ ಖರೀದಿ ಮಾಡಿದ್ದಾರೆ. ಬ್ಯಾಟ್ ಮಳಿಗೆಗೆ ಹೋಗಿ ಅಲ್ಲಿನ ತಜ್ಞರೊಂದಿಗೆ ಚರ್ಚಿಸಿ ತಾವೇ ಬ್ಯಾಟ್ ಪರೀಕ್ಷೆ ನಡೆಸುತ್ತಿರುವುದನ್ನು ಇನ್ ಸ್ಟಾಗ್ರಾಂ ಲೈವ್ ಮೂಲಕ ಹಂಚಿಕೊಂಡಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕೊನೇ ಕ್ಷಣದಲ್ಲಿ ರೈನಾ ಐಪಿಎಲ್ ನಿಂದ ಹೊರಬಂದಿದ್ದರು. ಇದರಿಂದಾಗಿ ಸಾಕಷ್ಟು ವಿವಾದವೂ ಎದ್ದಿತ್ತು. ಆದರೆ ಈ ಬಾರಿಯೂ ಅವರನ್ನು ಮತ್ತೆ ಚೆನ್ನೈ ತಂಡ ಉಳಿಸಿಕೊಂಡಿದೆ. ಹೀಗಾಗಿ ಅವರು ಚೆನ್ನೈ ಪರ ಆಡಲು ಸಿದ್ಧತೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ರಿಷಬ್ ಪಂತ್ ರಂತೆ ಮಾಡಲು ಹೋದ ರಿಚಾ ಘೋಷ್: ಸಿಟ್ಟಾದ ದಕ್ಷಿಣ ಆಫ್ರಿಕಾ ಬ್ಯಾಟಿಗರು

IND vs WI: ಟಾಸ್ ಗೆದ್ದ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

INDW vs SAW: ದಕ್ಷಿಣ ಆಫ್ರಿಕಾ ಎದುರು ಕೊನೆಯ ಹಂತದಲ್ಲಿ ಭಾರತ ಮಹಿಳೆಯರು ಸೋತಿದ್ದಕ್ಕೆ ಕಾರಣ ಇದುವೇ

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಫೇರ್

ಭಾರತ, ದಕ್ಷಿಣ ಆಫ್ರಿಕಾ ಮಹಿಳೆಯರ ವಿಶ್ವಕಪ್ ಪಂದ್ಯ ನಡೆಸಲು ಇಂದು ಇದರದ್ದೇ ಭಯ

ಮುಂದಿನ ಸುದ್ದಿ
Show comments