ಮುಂಬೈ: ಇತರ ಐಪಿಎಲ್ ಫ್ರಾಂಚೈಸಿಗಳಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡಾ ತನ್ನ ಆಟಗಾರರನ್ನು ರಿಲೀಸ್ ಮಾಡಿದ್ದು, ಸ್ಟಾರ್ ಆರಂಭಿಕ ಏರಾನ್ ಫಿಂಚ್ ರನ್ನು ಕೈ ಬಿಟ್ಟಿದೆ.
ಕ್ರಿಸ್ ಮೋರಿಸ್, ಮೊಯಿನ್ ಅಲಿ, ಡೇಲ್ ಸ್ಟೈನ್, ಶಿವಂ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಪಾರ್ಥಿವ್ ಪಟೇಲ್ ಮುಂತಾದ ಸ್ಟಾರ್ ಆಟಗಾರರನ್ನೂ ಕೈ ಬಿಟ್ಟಿದೆ. ಈ ಪೈಕಿ ಪಾರ್ಥಿವ್ ನಿವೃತ್ತಿ ಘೋಷಿಸಿದ್ದರು. ಇದೀಗ ಆರ್ ಸಿಬಿಗೆ 4 ವಿದೇಶೀ ಆಟಗಾರರು ಸೇರಿದಂತೆ 13 ಆಟಗಾರರನ್ನು ಖರೀದಿಸುವ ಅವಕಾಶವಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!