ಮುಂಬೈ: ಐಪಿಎಲ್ 14 ಅಮಾನತುಗೊಂಡ ಬೆನ್ನಲ್ಲೇ ಆಸ್ಟ್ರೇಲಿಯಾ ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಮಾಲ್ಡೀವ್ಸ್ ನಲ್ಲಿ ಕ್ವಾರಂಟೈನ್ ಗೊಳಪಡಿಸಲಾಗಿದೆ.
ಭಾರತದಿಂದ ನೇರವಾಗಿ ಆಸೀಸ್ ಆಟಗಾರರಿಗೆ ತವರಿಗೆ ತೆರಳಲು ಅಲ್ಲಿನ ಸರ್ಕಾರ ಪ್ರಯಾಣ ನಿರ್ಬಂಧ ವಿಧಿಸಿದೆ. ಹೀಗಾಗಿ ಆರ್ ಸಿಬಿ ಆಟಗಾರರನ್ನು ಮಾಲ್ಡೀವ್ಸ್ ನ ಪಂಚತಾರಾ ಹೋಟೆಲ್ ಗೆ ರವಾನಿಸಲಾಗಿದೆ.
ಇಲ್ಲಿ ಕ್ವಾರಂಟೈನ್ ಗೊಳಗಾಗಲಿರುವ ಕ್ರಿಕೆಟಿಗರು ಬಳಿಕ ಅಲ್ಲಿಂದ ತವರಿಗೆ ತೆರಳಲಿದ್ದಾರೆ. ಇನ್ನು, ದೇಶೀಯ ಕ್ರಿಕೆಟಿಗರನ್ನು ಅವರ ತವರಿಗೆ ರವಾನಿಸಲಾಗಿದೆ.