ಮುಂಬೈ: ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ನ ರವಿಚಂದ್ರನ್ ಅಶ್ವಿನ್ ವಿನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ಪರ 19 ನೇ ಓವರ್ ವೇಳೆಗೆ 28 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಅಶ್ವಿನ್ ಇದ್ದಕ್ಕಿದ್ದಂತೆ ಆಟ ನಿಲ್ಲಿಸಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಈ ಮೂಲಕ ಅವರು ರಿಟೈರ್ಡ್ ಔಟ್ ಆಯ್ಕೆ ಮಾಡಿ ಐಪಿಎಲ್ ಇತಿಹಾಸದಲ್ಲೇ ಈ ನೂತನ ನಿಯಮದ ಲಾಭ ಪಡೆದ ಮೊದಲ ಆಟಗಾರ ಎಂಬ ದಾಖಲೆ ಮಾಡಿದರು.
ಬಳಿಕ ಅಶ್ವಿನ್ ಸ್ಥಾನಕ್ಕೆ ಬ್ಯಾಟಿಂಗ್ ಗೆ ಬಂದ ರಿಯಾನ್ ಪರಗ್ ಬ್ಯಾಟಿಂಗ್ ಗೆ ಬಂದರು. ಇನ್ನೊಂದೆಡೆ ಬ್ಯಾಟಿಂಗ್ ಮಾಡುತ್ತಿದ್ದ ಶಿಮ್ರಾನ್ ಹೆಟ್ಮೈರ್ ಅಶ್ವಿನ್ ಬಳಲಿದ್ದ ಕಾರಣಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟರು ಎಂದಿದ್ದಾರೆ.