ಮುಂಬೈ: ಐಪಿಎಲ್ 2022 ರಲ್ಲಿ ಸತತ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿ ಮೆರೆಯುತ್ತಿದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ರುಚಿ ತೋರಿಸಿದೆ.
ಇಂದಿನ ಪಂದ್ಯದಲ್ಲಿ ಕೆಕೆಆರ್ ಡೆಲ್ಲಿ ವಿರುದ್ಧ 44 ರನ್ ಗಳ ಸೋಲುಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಅಗ್ರ ಕ್ರಮಾಂಕದ ಪೃಥ್ವಿ ಶಾ 51, ಡೇವಿಡ್ ವಾರ್ನರ್ 61 ರಿಷಬ್ ಪಂತ್ 27 ರನ್ ಗಳ ಕೊಡುಗೆ ನೀಡಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ 19.4 ಓವರ್ ಗಳಲ್ಲಿ 171 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಶ್ರೇಯಸ್ ಅಯ್ಯರ್ 54, ನಿತೀಶ್ ರಾಣಾ 30 ರನ್ ಗಳಿಸಿದರು. ಇದರೊಂದಿಗೆ ಕೆಕೆಆರ್ ಕೂಟದ ಎರಡನೇ ಸೋಲು ಕಂಡಿತು.