Publish Date: Sun, 10 Apr 2022 (08:10 IST)
Updated Date: Sun, 10 Apr 2022 (08:24 IST)
ಮುಂಬೈ: ಐಪಿಎಲ್ 2022 ರಲ್ಲಿ ಮೊದಲ ಬಾರಿಗೆ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿರುವ ಸಿಎಸ್ ಕೆ ನಾಯಕ ರವೀಂದ್ರ ಜಡೇಜಾಗೆ ಟೀಕೆಯ ಸುರಿಮಳೆಯಾಗಿದೆ.
ಇದುವರೆಗೆ ಆಡಿದ ನಾಲ್ಕೂ ಪಂದ್ಯಗಳನ್ನು ಸಿಎಸ್ ಕೆ ಸೋತಿದೆ. ಇದು ಅಭಿಮಾನಿಗಳ ಹತಾಶೆ ಹೆಚ್ಚಲು ಕಾರಣವಾಗಿದೆ. ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯವನ್ನೂ 8 ವಿಕೆಟ್ ಗಳಿಂದ ಹಾಲಿ ಚಾಂಪಿಯನ್ನರು ಸೋತ ಬಳಿಕ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವೀಂದ್ರ ಜಡೇಜಾ ಉತ್ತಮ ಆಟಗಾರನಾಗಿರಬಹುದು. ಆದರೆ ನಾಯಕನಾಗಲು ನಾಲಾಯಕ್ಕು ಎಂದು ಫ್ಯಾನ್ಸ್ ಜರೆದಿದ್ದಾರೆ.