Publish Date: Sat, 09 Apr 2022 (09:39 IST)
Updated Date: Sat, 09 Apr 2022 (09:40 IST)
ಮುಂಬೈ: ಐಪಿಎಲ್ 2022 ರಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಗೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಾಳಿಯಾಗಿದೆ.
ಇಂದಿನ ಎರಡನೇ ಪಂದ್ಯದಲ್ಲಿ ರೋಹಿತ್ ಪಡೆಗೆ ಫಾಡು ಪ್ಲೆಸಿಸ್ ಪಡೆ ಕಠಿಣ ಸವಾಲೊಡ್ಡುವುದು ಖಚಿತ. ಮುಂಬೈ ಪರ ನಾಯಕ ರೋಹಿತ್ ಶರ್ಮಾ ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಬೌಲಿಂಗ್ ನಲ್ಲಿ ಬುಮ್ರಾ ಕರಾಮತ್ತು ತೋರಬೇಕಿದೆ.
ಇತ್ತ ಆರ್ ಸಿಬಿ ಸತತ ಎರಡು ಗೆಲುವಿನಿಂದ ಉಬ್ಬಿಹೋಗಿದೆ. ಈ ಪಂದ್ಯಕ್ಕೆ ಗ್ಲೆನ್ ಮ್ಯಾಕ್ಸ್ ವೆಲ್ ಕೂಡಾ ಕಮ್ ಬ್ಯಾಕ್ ಮಾಡುವುದರಿಂದ ಬ್ಯಾಟಿಂಗ್ ಸದೃಢವಾಗಿದೆ ಎಂದೇ ಹೇಳಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.