Publish Date: Fri, 08 Apr 2022 (10:16 IST)
Updated Date: Fri, 08 Apr 2022 (10:19 IST)
ಮುಂಬೈ: ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು ಸೋತ ಬೆನ್ನಲ್ಲೇ ಡೆಲ್ಲಿ ನಾಯಕ ರಿಷಬ್ ಪಂತ್ ಗೆ ದಂಡದ ಬರೆ ಸಿಕ್ಕಿದೆ.
ಲಕ್ನೋ ವಿರುದ್ಧ 6 ವಿಕೆಟ್ ಗಳ ಸೋಲುಂಡ ಡೆಲ್ಲಿ ಕ್ಯಾಪಿಟಲ್ಸ್ ಈ ಮೂಲಕ ಸತತ ಸೋಲಿನ ರುಚಿ ಕಂಡಿತು. ಜೊತೆಗೆ ನಿನ್ನೆಯ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ರಿಷಬ್ ಗೆ 12 ಲಕ್ಷ ರೂ.ಗಳ ದಂಡವೂ ಸಿಕ್ಕಿತು.
ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡಾ ನಿಧಾನಗತಿಯ ಓವರ್ ಮಾಡಿದ್ದಕ್ಕೆ ದಂಡ ತೆತ್ತಿದ್ದರು.