Select Your Language

Notifications

webdunia
webdunia
webdunia
webdunia

ಸೋಲಿನ ಹತಾಶೆಯಲ್ಲಿ ಕ್ಯಾಮರಾ ಟೆಕ್ನಿಷಿಯನ್ ಮೇಲೆ ಕೆಂಡ ಕಾರಿದ ರೋಹಿತ್ ಶರ್ಮಾ

ಸೋಲಿನ ಹತಾಶೆಯಲ್ಲಿ ಕ್ಯಾಮರಾ ಟೆಕ್ನಿಷಿಯನ್ ಮೇಲೆ ಕೆಂಡ ಕಾರಿದ ರೋಹಿತ್ ಶರ್ಮಾ
ಮುಂಬೈ , ಗುರುವಾರ, 7 ಏಪ್ರಿಲ್ 2022 (10:30 IST)
ಮುಂಬೈ: ಐಪಿಎಲ್ ನಲ್ಲಿ ನಿನ್ನೆ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧವೂ ಸೋಲುವುದರೊಂದಿಗೆ ಒಂದೇ ಒಂದು ಗೆಲುವು ಕಾಣದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹತಾಶೆಗೊಳಗಾಗಿದ್ದಾರೆ.

ನಿನ್ನೆ ಪಂದ್ಯದ ಬಳಿಕ ನಿರೂಪಕರ ಮುಂದೆ ಮಾತನಾಡಲು ಬಂದಾಗ ರೋಹಿತ್ ಮುಖದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು. ಇದರ ಜೊತೆಗೆ ನಿರೂಪಕರು ಕೇಳುವ ಪ್ರಶ್ನೆಯೂ ಪ್ರೇಕ್ಷಕರ ಸದ್ದಿಗೆ ಕೇಳದೇ ಹೋದಾಗ ರೋಹಿತ್ ಕೆಂಡಾ ಮಂಡಲರಾದರು.

ಕ್ಯಾಮರಾ ಟೆಕ್ನಿಷಿಯನ್ ಗೆ ಸೌಂಡ್ ಜಾಸ್ತಿ ಮಾಡೋ ಎಂದು ಕೂಗಾಡಿದರು. ಸಾಮಾನ್ಯವಾಗಿ ಕೂಲ್ ಆಗಿರುವ ರೋಹಿತ್ ಇದೀಗ ಮುಂಬೈ ಇಂಡಿಯನ್ಸ್ ಸತತ ಸೋಲಿನಿಂದ ಕಂಗೆಟ್ಟಿರುವುದು ಸ್ಪಷ್ಟವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಲಕ್ನೋ ಗೆಲುವಿಗೆ ಕಡಿವಾಣ ಹಾಕುತ್ತಾ ಡೆಲ್ಲಿ?