Select Your Language

Notifications

webdunia
webdunia
webdunia
webdunia

ಐಪಿಎಲ್ ಆರಂಭಕ್ಕೂ ಮೊದಲೇ ರಾಜಸ್ಥಾನ್ ತಂಡಕ್ಕೆ ಕೊರೋನಾಘಾತ!

ಐಪಿಎಲ್ ಆರಂಭಕ್ಕೂ ಮೊದಲೇ ರಾಜಸ್ಥಾನ್ ತಂಡಕ್ಕೆ ಕೊರೋನಾಘಾತ!
ಮುಂಬೈ , ಗುರುವಾರ, 13 ಆಗಸ್ಟ್ 2020 (11:46 IST)
ಮುಂಬೈ: ಕೊರೋನಾ ನಡುವೆಯೂ ಐಪಿಎಲ್ 13 ಆಯೋಜಿಸಲು ಹೊರಟಿರುವ ಬಿಸಿಸಿಐಗೆ ಆರಂಭಕ್ಕೂ ಮೊದಲೇ ಆಘಾತ ಸಿಕ್ಕಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಕೊರೋನಾ ಸೋಂಕಿಗೊಳಗಾಗಿದ್ದಾರೆ.


ಕೆಲವೇ ದಿನಗಳಲ್ಲಿ ತರಬೇತಿಗಾಗಿ ರಾಜಸ್ಥಾನ್ ತಂಡ ಮುಂಬೈನಲ್ಲಿ ಸೇರಲಿದೆ. ಇದಕ್ಕೂ ಮೊದಲೇ ದಿಶಾಂತ್ ಕೊರೋನಾ ಸೋಂಕಿಗೊಳಗಾಗಿರುವ ಸುದ್ದಿ ಬಂದಿದೆ. ಸದ್ಯಕ್ಕೆ ಅವರನ್ನು 14 ದಿನಗಳ ಕ್ವಾರಂಟೈನ್ ಗೊಳಪಡಿಸಲಾಗಿದೆ.

ಆದರೆ ಸಮಾಧಾನಕರ ಸಂಗತಿ ಎಂದರೆ ರಾಜಸ್ಥಾನ್ ತಂಡದ ಯಾವುದೇ ಆಟಗಾರನೂ ಕಳೆದ 10 ದಿನಗಳಲ್ಲಿ ಅವರ ಸಂಪರ್ಕಕ್ಕೆ ಬಂದಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಅವಕಾಶ ಸಿಗದ ಬೇಸರಕ್ಕೆ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಕ್ರಿಕೆಟಿಗ