Publish Date: Wed, 12 Aug 2020 (11:56 IST)
Updated Date: Wed, 12 Aug 2020 (11:57 IST)
ಬೆಂಗಳೂರು: ಐಪಿಎಲ್ 13 ತರಬೇತಿಗೆ ಎಲ್ಲಾ ತಂಡಗಳು ಸಿದ್ಧತೆ ನಡೆಸುತ್ತಿವೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಮೊದಲನೆಯ ತಂಡವಾಗಿ ಯುಎಇಗೆ ಹಾರಲು ಸಿದ್ಧವಾಗಿದೆ. ಹಾಗಿದ್ದರೆ ಆರ್ ಸಿಬಿ ಕತೆಯೇನು?
ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಎಇಗೆ ತೆರಳುವುದು ಯಾವಾಗ ಗೊತ್ತಾ? ಮೂಲಗಳ ಪ್ರಕಾರ ಆಗಸ್ಟ್ ಕೊನೆಯ ವಾರದಲ್ಲಿ ಕೊಹ್ಲಿ ಪಡೆ ಯುಎಇಗೆ ಹಾರಲಿದೆ.
ಅಲ್ಲಿ ಕ್ವಾರಂಟೈನ್ ಅವಧಿ ಮುಗಿಸಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದೆ. ಈ ಬಾರಿಯಾದರೂ ತಮ್ಮ ಅದೃಷ್ಟ ಬದಲಾಗಬಹುದು ಎಂದು ಆರ್ ಸಿಬಿ ನಿರೀಕ್ಷೆಯಲ್ಲಿದೆ.