Select Your Language

Notifications

webdunia
webdunia
webdunia
webdunia

ಐಪಿಎಲ್ 13 ಅಭ್ಯಾಸಕ್ಕೆ ಧೋನಿ: ದಿನಾಂಕ ಫಿಕ್ಸ್

ಸಿಎಸ್ ಕೆ
ಚೆನ್ನೈ: ಐಪಿಎಲ್ 13 ಗೆ ತಯಾರಿ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ಭರ್ಜರಿ ಸುದ್ದಿಯೊಂದು ಬರುತ್ತಿದೆ. ನಾಯಕ ಧೋನಿ ಅಭ್ಯಾಸಕ್ಕೆ ಮರಳುವ ದಿನಾಂಕ ಈಗ ಬಹುತೇಕ ಖಚಿತವಾಗಿದೆ.


ಯುಎಇಗೆ ತೆರಳುವ ಮೊದಲು ಸಿಎಸ್ ಕೆ ತಂಡ ಚೆನ್ನೈನಲ್ಲಿ ಒಂದು ವಾರಗಳ ಕಾಲ ಅಭ್ಯಾಸ ನಡೆಸಲಿದೆ ಎಂಬ ಸುದ್ದಿ ಈಗಾಗಲೇ ಬಂದಿದೆ. ಈ ಅಭ್ಯಾಸಕ್ಕೆ ಧೋನಿ ಸೇರಿದಂತೆ ಹಿರಿಯ ಆಟಗಾರರೂ ಹಾಜರಾಗಲಿದ್ದಾರೆ ಎಂಬ ಸುದ್ದಿಯಿತ್ತು.

ಅದೀಗ ನಿಜವಾಗುತ್ತಿದೆ. ಮೂಲಗಳ ಪ್ರಕಾರ ಆಗಸ್ಟ್ 16 ರಿಂದ ಧೋನಿ ಚೆನ್ನೈನ ಚಿಪಾಕ್ ಮೈದಾನದಲ್ಲಿ ಅಭ್ಯಾಸಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಇಲ್ಲಿ ಧೋನಿ ಅಭ್ಯಾಸ ನಡೆಸಲು ಬಂದರೆ ಅಭಿಮಾನಿಗಳ ದಂಡೇ ಹರಿದು ಬರುತ್ತಿತ್ತು. ಆದರೆ ಈಗ ಕೊರೋನಾ ಕಾರಣದಿಂದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಲಾ ಅಭ್ಯಾಸ ನಡೆಸುವುದನ್ನು ನೋಡಲು ಸಾಧ್ಯವಿಲ್ಲ. ಹಾಗಿದ್ದರೂ ಧೋನಿ ಅಭ್ಯಾಸಕ್ಕಿಳಿಯುತ್ತಿದ್ದಾರೆ ಎನ್ನುವುದೇ ಎಲ್ಲರಿಗೂ ಖುಷಿಯ ಸಂಗತಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಜತೆಗೆ ಈ ಕನ್ನಡ ನಟನಿಗೆ ಡಿಮ್ಯಾಂಡ್ ಮಾಡಿದ ರಾಜಸ್ಥಾನ್ ರಾಯಲ್ಸ್!