Select Your Language

Notifications

webdunia
webdunia
webdunia
webdunia

ಐಪಿಎಲ್ 14: ಪೊಲ್ಲಾರ್ಡ್ ಸುನಾಮಿಗೆ ಗೆದ್ದ ಮುಂಬೈ ಇಂಡಿಯನ್ಸ್

ಐಪಿಎಲ್ 14: ಪೊಲ್ಲಾರ್ಡ್ ಸುನಾಮಿಗೆ ಗೆದ್ದ ಮುಂಬೈ ಇಂಡಿಯನ್ಸ್
ನವದೆಹಲಿ , ಭಾನುವಾರ, 2 ಮೇ 2021 (08:46 IST)
ನವದೆಹಲಿ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಿರನ್ ಪೊಲ್ಲಾರ್ಡ್ ಹೊಡೆಬಡಿಯ ಬ್ಯಾಟಿಂಗ್ ನಿಂದಾಗಿ ಮುಂಬೈ ಬೃಹತ್ ಮೊತ್ತ ಚೇಸ್ ಮಾಡಿ 4 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಅಂಬಟಿ ರಾಯುಡು ಕೇವಲ 27 ಎಸೆತಗಳಿಂದ ಅಜೇಯ 72 ರನ್ ಚಚ್ಚಿದರೆ, ಮೊಯಿನ್ ಅಲಿ 58, ಫಾ ಡು ಪ್ಲೆಸಿಸ್ 50 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಮುಂಬೈಗೆ ರೋಹಿತ್ ಶರ್ಮಾ 35 ಮತ್ತು ಕ್ವಿಂಟನ್ ಡಿ ಕಾಕ್ 38 ರನ್ ಗಳಿಸಿ ಉತ್ತಮ ಆರಂಭ ಕೊಡಿಸಿದರು. ಆದರೆ ಮುಂಬೈ ಇಂಡಿಯನ್ಸ್ ಗೇರ್ ಬದಲಾಯಿಸಿದ್ದು ಕಿರನ್ ಪೊಲ್ಲಾರ್ಡ್. ಕೇವಲ 34 ಎಸೆತಗಳಿಂದ 87 ರನ್ ಚಚ್ಚಿದ ಪೊಲ್ಲಾರ್ಡ್ ಅಂತಿಮ ಎಸೆತದಲ್ಲಿ ತಂಡಕ್ಕೆ ಗೆಲುವು ಕೊಡಿಸಿದರು. ಅಂತಿಮವಾಗಿ ಮುಂಬೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಸ್ ಗೇಲ್ ಜೊತೆ ಶರ್ಟ್ ಲೆಸ್ ಆದ ಯಜುವೇಂದ್ರ ಚಾಹಲ್