ಮುಂಬೈ: ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಮೇಲೆ ಕೊರೋನಾ ಕರಿನೆರಳು ಬೀರಿದೆ. ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದೇ ಹೋದರೆ ಬಿಸಿಸಿಐ ಇನ್ನೊಂದು ದೇಶದಲ್ಲಿ ಟೂರ್ನಿ ಆಯೋಜಿಸಲು ತೀರ್ಮಾನಿಸಿದೆ.
ಈ ಬಾರಿಯ ಆತಿಥ್ಯ ಭಾರತದ್ದಾಗಿದೆ. ಆದರೆ ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದೇ ಹೋದರೆ ವಿದೇಶೀ ತಂಡಗಳು ಭಾರತಕ್ಕೆ ಬರಲು ಹಿಂದೇಟು ಹಾಕಲಿದೆ. ಐಸಿಸಿ ಈಗಾಗಲೇ ಈ ಬಗ್ಗೆ ಸುಳಿವು ನೀಡಿದೆ.
ಇದೀಗ ಬಿಸಿಸಿಐ ಮೂಲಗಳು ಈ ಬಗ್ಗೆ ಹೇಳಿಕೆ ನೀಡಿದ್ದು, ಒಂದು ವೇಳೆ ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದೇ ಹೋದರೆ ಯುಎಇ ದೇಶದಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಆಯ್ಕೆ ಬಿಸಿಸಿಐ ಮುಂದಿದೆ ಎಂದಿದೆ.