ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಮಿತಿ ಮೀರಿರುವ ಹಿನ್ನಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಆತಿಥ್ಯ ಭಾರತದ ಕೈ ತಪ್ಪುವ ಭೀತಿ ಎದುರಾಗಿದೆ.
ಐಸಿಸಿ ಈಗ ಭಾರತದ ಬದಲಾಗಿ ಶ್ರೀಲಂಕಾ,ಯುಎಇಯಲ್ಲಿ ವಿಶ್ವಕಪ್ ಆಯೋಜಿಸಲು ಚಿಂತನೆ ನಡೆಸುತ್ತಿದೆ. ಭಾರತದಲ್ಲಿ ಕೊರೋನಾ ನಿಯಂತ್ರಣದಲ್ಲಿಲ್ಲ. ಹೀಗಾಗಿ ನಾವು ಅನ್ಯ ರಾಷ್ಟ್ರಗಳ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಐಸಿಸಿ ಹೇಳಿದೆ.
ವಿಶೇಷವಾಗಿ ಆಸ್ಟ್ರೇಲಿಯಾ ಆಟಗಾರರು ಭಾರತದಲ್ಲಿ ವಿಶ್ವಕಪ್ ಆಯೋಜಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಎಲ್ಲಾ ರಾಷ್ಟ್ರಗಳ ತಂಡಗಳೂ ಭಾರತದಲ್ಲಿ ಉಳಿದುಕೊಳ್ಳುವುದು ಸುರಕ್ಷಿತವಲ್ಲ ಎನ್ನುವುದು ಅವರ ಅಭಿಪ್ರಾಯ. ಒಂದು ವೇಳೆ ಅಕ್ಟೋಬರ್ ವೇಳೆಗೆ ಪರಿಸ್ಥಿತಿ ಸುಧಾರಿಸದೇ ಹೋದರೆ ವಿಶ್ವಕಪ್ ಭಾರತದ ಕೈತಪ್ಪಲಿದೆ.