Select Your Language

Notifications

webdunia
webdunia
webdunia
webdunia

ಐಪಿಎಲ್ 14: ಇಂದು ಧೋನಿಗೆ ರೋಹಿತ್ ಶರ್ಮಾ ಎದುರಾಳಿ

ಐಪಿಎಲ್ 14: ಇಂದು ಧೋನಿಗೆ ರೋಹಿತ್ ಶರ್ಮಾ ಎದುರಾಳಿ
ಅಹಮ್ಮದಾಬಾದ್ , ಶನಿವಾರ, 1 ಮೇ 2021 (07:29 IST)
ಅಹಮ್ಮದಾಬಾದ್: ಐಪಿಎಲ್ 14 ರಲ್ಲಿ ಇಂದು ಮತ್ತೊಂದು ಜಿದ್ದಾಜಿದ್ದಿನ ಕಾಳಗಕ್ಕೆ ವೇದಿಕೆ ರೆಡಿಯಾಗಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದಿನ ಪಂದ್ಯ ನಡೆಯಲಿದೆ.

 
ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದಿರುವ ಎರಡು ತಂಡಗಳ ನಡುವಿನ ಪೈಪೋಟಿ ಕುತೂಹಲ ಕೆರಳಿಸಿದೆ. ಚೆನ್ನೈ ಸತತ ಗೆಲುವಿನ ಹುಮ್ಮಸ್ಸಿನಲ್ಲಿದ್ದರೆ, ಅತ್ತ ಮುಂಬೈ ಕಳೆದ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿ ಪೈಪೋಟಿ ನೀಡುವ ತವಕದಲ್ಲಿದೆ.

ಚೆನ್ನೈಗೆ ಫಾ ಡು ಪ್ಲೆಸಿಸ್, ರವೀಂದ್ರ ಜಡೇಜಾ ಪ್ರಬಲ ಅಸ್ತ್ರ. ಅತ್ತ ಮುಂಬೈಗೆ ನಾಯಕ ರೋಹಿತ್ ಶರ್ಮಾನೇ ಕೀ ಆಟಗಾರ. ಈ ಹಾಲಿ-ಮಾಜಿ ಚಾಂಪಿಯನ್ ಗಳ ಕಾದಾಟದಲ್ಲಿ ಗೆಲ್ಲುವವರು ಯಾರು ಎಂದು ಕಾದು ನೋಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ರಾಹುಲ್ ಪಡೆ ವಿರುದ್ಧ ಆರ್ ಸಿಬಿಗೆ ಸೋಲು