Daily Horoscope

Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಲಕ್ನೋ ಗೆಲುವಿನಿಂದ ಮೇರೆ ಮೀರಿದ ಕೆಎಲ್ ರಾಹುಲ್ ಖುಷಿ

ಐಪಿಎಲ್ 2022
ಮುಂಬೈ: ಐಪಿಎಲ್ 2022 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ 12 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ನಾಯಕನ ಆಟವಾಡಿದ ಕೆಎಲ್ ರಾಹುಲ್ 68 ರನ್ ಗಳಿಸಿದರೆ ಕೊನೆಯಲ್ಲಿ ಸಿಡಿದ ದೀಪಕ್ ಹೂಡಾ 51 ರನ್ ಗಳಿಸಿದರು.

ಈ ಐಪಿಎಲ್ ಕೂಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದ್ದೇ ಕಡಿಮೆ. ಅದರಲ್ಲೂ 169 ರನ್ ಬೆನ್ನತ್ತುವುದು ಅಸಾಧ್ಯವೇನೂ ಆಗಿರಲಿಲ್ಲ. ರಾಹುಲ್ ತ್ರಿಪಾಠಿ 44, ನಿಕಲಸ್ ಪೂರನ್ 34 ರನ್ ಗಳಿಸಿ ಗೆಲುವಿನ ಸೂಚನೆ ಕೊಟ್ಟರು. ಆದರೆ ಕೊನೆಯಲ್ಲಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಗೆಲುವಿನ ಖುಷಿ ನಾಯಕ ಕೆಎಲ್ ರಾಹುಲ್ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಗೆಲುವಿಗೆ ದೀಪಕ್ ಹೂಡಾ ಬ್ಯಾಟಿಂಗ್ ಕಾರಣ ಎಂದು ಸಂಪೂರ್ಣ ಕ್ರೆಡಿಟ್ ಅವರಿಗೇ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವೀಂದ್ರ ಜಡೇಜಾ ಮೇಲೆ ಧೋನಿ ಬಾಸ್ ಗಿರಿಯೇ ಸೋಲಿಗೆ ಕಾರಣವಾ?!