Publish Date: Tue, 05 Apr 2022 (08:50 IST)
Updated Date: Tue, 05 Apr 2022 (09:16 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ನ್ನು ಎದುರಿಸಲಿದೆ.
ಮೊದಲ ಪಂದ್ಯದಲ್ಲಿ ಸೋತ ಬಳಿಕ ಎರಡನೇ ಪಂದ್ಯದಲ್ಲಿ ಸಿಕ್ಕ ಭರ್ಜರಿ ಗೆಲುವು ಆರ್ ಸಿಬಿ ಆತ್ಮವಿಶ್ವಾಸ ಹೆಚ್ಚಿದೆ. ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆರ್ ಸಿಬಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ.
ಆದರೆ ಎದುರಾಳಿ ರಾಜಸ್ಥಾನ್ ಆಡಿದ ಎರಡೂ ಪಂದ್ಯಗಳಲ್ಲಿ ಎರಡೂ ಗೆಲುವು ಪಡೆದುಕೊಂಡು ಅತ್ಯುತ್ಸಾಹದಲ್ಲಿದೆ. ಹೀಗಾಗಿ ಆರ್ ಸಿಬಿ ಪಾಲಿಗೆ ಇಂದು ರಾಜಸ್ಥಾನ್ ಕಠಿಣ ಎದುರಾಳಿ ಎಂದೇ ಹೇಳಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.