Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ವೇಗಿಯ ಸೇರ್ಪಡೆಗೊಳಿಸಿದ ಕಿಂಗ್ಸ್ ಪಂಜಾಬ್

ಆಸ್ಟ್ರೇಲಿಯಾ ವೇಗಿಯ ಸೇರ್ಪಡೆಗೊಳಿಸಿದ ಕಿಂಗ್ಸ್ ಪಂಜಾಬ್
ದುಬೈ , ಶನಿವಾರ, 21 ಆಗಸ್ಟ್ 2021 (11:12 IST)
ದುಬೈ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಉಳಿದ ಭಾಗದ ಪಂದ್ಯಗಳಿಗೆ ಕಿಂಗ್ಸ್ ಪಂಜಾಬ್ ತಂಡ ಆಸ್ಟ್ರೇಲಿಯಾ ವೇಗಿ ನಥನ್ ಎಲಿಸ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.


ಎರಡನೇ ಭಾಗದ ಐಪಿಎಲ್ 14 ರಲ್ಲಿ ಪಂಜಾಬ್ ತಂಡದಲ್ಲಿ ಜೇ ರಿಚರ್ಡ್ ಸನ್ ಮತ್ತು ರಿಲೆ ಮೆರಿಡಿತ್ ಗೈರಾಗಲಿದ್ದಾರೆ. ಹೀಗಾಗಿ ಇವರಿಬ್ಬರ ಬದಲಿಗೆ ಆಸೀಸ್ ವೇಗಿಯನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ಇನ್ನಷ್ಟು ಸ್ಟಾರ್ ಕ್ರಿಕೆಟಿಗರು ಐಪಿಎಲ್ 14 ರ ಉಳಿದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದೇ ತಿಂಗಳು ಬಾಂಗ್ಲಾ ವಿರುದ್ಧದ ಟಿ20 ಪಂದ್ಯದ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಎಲಿಸ್ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಬಗ್ಗೆ ಕೊಹ್ಲಿ-ಬಿಸಿಸಿಐ ಭಾರೀ ಮೀಟಿಂಗ್