Webdunia - Bharat's app for daily news and videos

Install App

ಅವಮಾನವಾದ ಕ್ರೀಡಾಂಗಣದಲ್ಲೇ ಅಬ್ಬರಿಸಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ಕನ್ನಡಿಗ ಕೆ.ಎಲ್‌.ರಾಹುಲ್‌

Sampriya
ಮಂಗಳವಾರ, 22 ಏಪ್ರಿಲ್ 2025 (23:20 IST)
Photo Courtesy X
ಲಖನೌ: ಕನ್ನಡಿಗ ಕೆ.ಎಲ್‌. ರಾಹುಲ್‌ ಅವರ ಅಜೇಯ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತು.

ಕಳೆದ ಆವೃತ್ತಿಯಲ್ಲಿ ಪಂದ್ಯವೊಂದನ್ನು ಸೋತ ಬಳಿಕ ಲಖನೌ ತಂಡದ ನಾಯಕರಾಗಿ ರಾಹುಲ್‌ ಅವರನ್ನು ತಂಡದ ಮಾಲೀಕ ಸಂಜೀವ್‌ ಗೋಯಂಕಾ ಇದೇ ಕ್ರೀಡಾಂಗಣದಲ್ಲಿ ಎಲ್ಲರ ಎದುರು ಅವಮಾನಿಸಿದ್ದರು. ಅದಕ್ಕೆ ಈಗ ರಾಹುಲ್‌ ಸೇಡು ತೀರಿಸಿಕೊಂಡಿದ್ದಾರೆ.

160 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು ಕೇವಲ 17.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಗೆದ್ದು ಬೀಗಿತು. ಮಾತ್ರವಲ್ಲ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 57 ರನ್‌ ಬಾರಿಸಿ ಲಖನೌ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ಲಖನೌನ ಏಕನಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ನಿಗದಿತ 20 ಓವರ್ಗಳಲ್ಲಿ 159 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಡೆಲ್ಲಿ ಪರವಾಗಿ ಅಮೋಘ ಬೌಲಿಂಗ್ ದಾಳಿ ನಡೆಸಿದ ಮುಖೇಶ್ ಕುಮಾರ್ 4, ಚಾಮೀರ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

160 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 17.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಗೆದ್ದು ಬೀಗಿತು. ಆರಂಭಿಕರಾದ ಅಭಿಷೇಕ್ ಪೋರೆಲ್ 51, ಕರುಣ್ ನಾಯರ್ 15, ಕೆಎಲ್ ರಾಹುಲ್ ಅಜೇಯ 57 ಹಾಗೂ ಅಕ್ಸರ್ ಪಟೇಲ್ ಅಜೇಯ 34 ರನ್ ಸಿಡಿಸುವ ಮೂಲಕ ಸುಲಭ ಜಯ ಸಾಧಿಸಿತು.  ಲಖನೌ ಪರ ಏಡನ್ ಮಾರ್ಕಂ 2 ವಿಕೆಟ್ ಪಡೆದು ಮಿಂಚಿದರು. ಇಂದಿನ ಪಂದ್ಯ ಗೆಲ್ಲು ಮೂಲಕ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿಕೆ ಕಂಡಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಯುವ ಅಥ್ಲೀಟ್‌ಗಳಿಗೆ ಮಿಡಿದ ಶಿವಂ ದುಬೆ ಹೃದಯ: ಆಲ್‌ರೌಂಡರ್‌ ಕ್ರಿಕೆಟಿಗನಿಂದ ಸಹಾಯಧನ ಘೋಷಣೆ

IPL 2025: ಆರ್‌ಸಿಬಿಯ ಪ್ಲೇ ಆಫ್‌ ಲೆಕ್ಕಾಚಾರ, ತವರಿನಲ್ಲಿ ಕನಿಷ್ಠ ಎರಡು ಪಂದ್ಯ ಗೆಲ್ಲಲೇಬೇಕಾದ ಒತ್ತಡ

IPL 2025: ಗೋಯಂಕಾಗೆ ಚಮಕ್‌ ಕೊಡ್ತಾರಾ ರಾಹುಲ್‌, ಡೆಲ್ಲಿ ವಿರುದ್ಧ ಮುಯ್ಯಿ ತೀರಿಸುತ್ತಾ ಲಖನೌ

IPL 2005: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು ಯಾರು ಗೊತ್ತಾ

Ambati Rayudu: ಆರ್ ಸಿಬಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಅಂಬಟಿ ರಾಯುಡು, ಇವರೇನಾ ಅವರು ಎಂದ ಫ್ಯಾನ್ಸ್

ಮುಂದಿನ ಸುದ್ದಿ
Show comments