ಯುವ ಅಥ್ಲೀಟ್‌ಗಳಿಗೆ ಮಿಡಿದ ಶಿವಂ ದುಬೆ ಹೃದಯ: ಆಲ್‌ರೌಂಡರ್‌ ಕ್ರಿಕೆಟಿಗನಿಂದ ಸಹಾಯಧನ ಘೋಷಣೆ

Sampriya
ಮಂಗಳವಾರ, 22 ಏಪ್ರಿಲ್ 2025 (19:48 IST)
Photo Courtesy X
ಚೆನ್ನೈ: ಪ್ರತಿಭಾನ್ವಿತ ಯುವ ಅಥ್ಲೀಟ್‌ಗಳ ಕಷ್ಟಕ್ಕೆ ಭಾರತದ ಖ್ಯಾತ ಆಲ್‌ರೌಂಡ್‌ ಕ್ರಿಕೆಟಿಗನ ಹೃದಯ ಮಿಡಿದಿದೆ. 10 ಅಥ್ಲೀಟ್‌ಗಳಿಗೆ ಪ್ರೋತ್ಸಾಹಧನ ಘೋಷಣೆ ಮಾಡಿದ್ದಾರೆ.

ಭಾರತ ತಂಡದ ಆಲ್‌ರೌಂಡರ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಶಿವಂ ದುಬೆ ಅವರು ತಮಿಳುನಾಡಿನ 10 ಮಂದಿ ಉದಯೋನ್ಮುಖ ಅಥ್ಲೀಟ್‌ಗಳಿಗೆ ತಲಾ ₹70 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ದುಬೆ ಘೋಷಿಸಿದ್ದಾರೆ.

ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಪ್ರಶಸ್ತಿ ಮತ್ತು ಸ್ಕಾಲರ್‌ಷಿಪ್ ಪ್ರದಾನ ಕಾರ್ಯಕ್ರಮದಲ್ಲಿ ದುಬೆ ಮಾತನಾಡಿದರು.  ಸಂಘವು ಕ್ರೀಡಾಪಟುಗಳಿಗೆ ತಲಾ ₹30 ಸಾವಿರ ಸ್ಕಾಲರ್‌ಷಿಪ್ ನೀಡಿ ಗೌರವಿಸಿತು. ಇದಲ್ಲದೇ ದುಬೆ ಪ್ರತ್ಯೇಕವಾಗಿ ₹70 ಸಾವಿರ ನೀಡುವುದಾಗಿ ಘೋಷಿಸಿದರು.

₹ 30 ಸಾವಿರ ಸಣ್ಣ ಮೊತ್ತದಂತೆ ಕಾಣಬಹುದು. ಆದರೆ ಅದನ್ನು ಪಡೆದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಪ್ರತಿಯೊಂದು ಪೈಸೆಯ ಗೌರವವೂ ದೊಡ್ಡದೇ. ಅದರಿಂದ ಪ್ರೇರಣೆಗೊಂಡು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ದುಬೆ ಕಾರ್ಯಕ್ರಮದಲ್ಲಿ ಹೇಳಿದರು.

ಪಿ.ಬಿ. ಅಭಿನಂದನ್ (ಟೇಬಲ್ ಟೆನಿಸ್), ಕೆ.ಎಸ್‌. ವೆನಿಸಾ ಶ್ರೀ (ಆರ್ಚರಿ), ಮುತ್ತುಮೀನಾ ವೆಲ್ಲಾಸಾಮಿ (ಪ್ಯಾರಾ ಅಥ್ಲೆಟಿಕ್ಸ್), ಶಮೀನಾ ರಿಯಾಜ್ (ಸ್ಕ್ವಾಷ್), ಆರ್.ಕೆ. ಜಯಂತ್, ಎಸ್‌. ನಂದನ್ (ಇಬ್ಬರೂ ಕ್ರಿಕೆಟ್), ಪಿ. ಕಮಲಿ (ಸರ್ಫಿಂಗ್), ಆರ್. ಅಭಿನಯ, ಆರ್‌.ಸಿ. ಜಿತಿನ್ ಅರ್ಜುನನ್ (ಇಬ್ಬರೂ ಅಥ್ಲೆಟಿಕ್ಸ್), ಎ. ತಕ್ಷಾಂತ್ (ಚೆಸ್) ಅವರು ಪ್ರೋತ್ಸಾಹಧನ ಪಡೆದಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

ಮುಂದಿನ ಸುದ್ದಿ
Show comments