Select Your Language

Notifications

webdunia
webdunia
webdunia
webdunia

ಐಪಿಎಲ್ 14 ಉಳಿದ ಪಂದ್ಯಕ್ಕೆ ವಿದೇಶೀ ಆಟಗಾರರು ಗೈರು?

ಐಪಿಎಲ್ 14 ಉಳಿದ ಪಂದ್ಯಕ್ಕೆ ವಿದೇಶೀ ಆಟಗಾರರು ಗೈರು?
ಮುಂಬೈ , ಬುಧವಾರ, 9 ಜೂನ್ 2021 (08:27 IST)
ಮುಂಬೈ: ಐಪಿಎಲ್ 14 ರ ಉಳಿದ ಪಂದ್ಯಗಳನ್ನು ಸೆಪ್ಟೆಂಬರ್ ನಲ್ಲಿ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಜೊತೆಗೆ ವೇಳಾಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದೆ.


ಆದರೆ 25 ದಿನಗಳ ಕಾಲ ನಡೆಯಲಿರುವ ಈ ಬ್ಯುಸಿ ಶೆಡ್ಯೂಲ್ ನಲ್ಲಿ ವಿದೇಶೀ ಆಟಗಾರರು ಭಾಗವಹಿಸುತ್ತಾರೆ ಎಂಬುದೇ ಅನುಮಾನವಾಗಿದೆ. ಈಗಾಗಲೇ ಎಲ್ಲಾ ಕ್ರಿಕೆಟ್ ರಾಷ್ಟ್ರಗಳ ವೇಳಾಪಟ್ಟಿ ನಿಗದಿಯಾಗಿದೆ. ಇದರ ನಡುವೆ ಈ ಕಿರು ಅವಧಿಯಲ್ಲಿ ಐಪಿಎಲ್ ಆಡಲು ವಿದೇಶೀ ಆಟಗಾರರು ಬರುವುದು ಅನುಮಾನ.

ಈಗಾಗಲೇ ಬಿಸಿಸಿಐ ವಿದೇಶೀ ಕ್ರಿಕೆಟ್ ಮಂಡಳಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದೆಯಂತೆ. ಒಂದು ವೇಳೆ ವಿದೇಶೀ ಆಟಗಾರರು ಪಾಲ್ಗೊಂಡರೆ ಸಂತೋಷ. ಇಲ್ಲದೇ ಹೋದರೂ ಐಪಿಎಲ್ ಟೂರ್ನಿ ನಡೆಯುವುದು ಖಚಿತ. ಅರ್ಧಕ್ಕೇ ನಿಂತ ಟೂರ್ನಿಯನ್ನು ಪೂರ್ತಿ ಮಾಡುವುದೇ ಬಿಸಿಸಿಐ ಮುಂದಿರುವ ಸದ್ಯದ ಗುರಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಶ್ರೀಲಂಕಾ ಕ್ರಿಕೆಟ್ ಸರಣಿ ವೇಳಾಪಟ್ಟಿ ಹೀಗಿದೆ