ದುಬೈ: ಐಪಿಎಲ್ 14 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 4 ರನ್ ಗಳ ರೋಚಕ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ಜೇಸನ್ ರಾಯ್ 44 ರನ್, ಕೇನ್ ವಿಲಿಯಮ್ಸನ್ 31 ರನ್ ಗಳಿಸಿದರು. ಹರ್ಷಲ್ ಪಟೇಲ್ 3, ಡೇನಿಯಲ್ ಕ್ರಿಸ್ಟಿಯನ್ 2, ಚಾಹಲ್ ಮತ್ತು ಗಾರ್ಟನ್ ತಲಾ 1 ವಿಕೆಟ್ ಕಬಳಿಸಿದರು.
ಈ ಸಾಧಾರಣ ಮೊತ್ತವನ್ನು ಆರ್ ಸಿಬಿ ಸುಲಭವಾಗಿ ಬೆನ್ನತ್ತಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಆರಂಭದಲ್ಲೇ ನಾಯಕ ಕೊಹ್ಲಿಯನ್ನು ಭುವನೇಶ್ವರ್ ಕುಮಾರ್ 5 ರನ್ ಗೇ ಔಟ್ ಮಾಡಿದರು. ಇದಾದ ಬಳಿಕ ದೇವದತ್ತ್ ಪಡಿಕ್ಕಲ್ 41 ರನ್ ಗಳಿಸಿದರು. ಗ್ಲೆನ್ ಮ್ಯಾಕ್ಸ್ ವೆಲ್ ಗೆಲುವಿನ ಆಸೆ ಚಿಗುರಿಸಿದರಾದರೂ 40 ರನ್ ಗಳಿಸಿದ್ದಾಗ ರನೌಟ್ ಆದರು. ಇದರಿಂದಾಗಿ ಆರ್ ಸಿಬಿ ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ಎಲ್ಲಾ ಬೌಲರ್ ಗಳೂ ತಲಾ 1 ವಿಕೆಟ್ ಪಡೆದರು.