Select Your Language

Notifications

webdunia
webdunia
webdunia
webdunia

ಐಪಿಎಲ್ 14: ರಾಜಸ್ಥಾನ್ ಗೆ ಹೈದರಾಬಾದ್ ಎದುರಾಳಿ

ಐಪಿಎಲ್ 14: ರಾಜಸ್ಥಾನ್ ಗೆ ಹೈದರಾಬಾದ್ ಎದುರಾಳಿ
ಮುಂಬೈ , ಭಾನುವಾರ, 2 ಮೇ 2021 (08:59 IST)
ಮುಂಬೈ: ಐಪಿಎಲ್ 14 ರಲ್ಲಿ ಇಂದು ಎರಡು ಪಂದ್ಯಗಳಿದ್ದು ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಪರಸ್ಪರ ಮುಖಾಮುಖಿಯಾಗಲಿದೆ.


ಇದೊಂಥರಾ ಸಮಾನ ದುಃಖಿಗಳ ನಡುವಿನ ಪಂದ್ಯ ಎನ್ನಬಹುದು. ಯಾಕೆಂದರೆ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಎರಡು ತಂಗಳು ಇದಾಗಿವೆ. ಈ ಪೈಕಿ ರಾಜಸ್ಥಾನ್ 6 ಪಂದ್ಯಗಳಿಂದ 2 ಪಂದ್ಯಗಳನ್ನು ಗೆದ್ದುಕೊಂಡರೆ ಹೈದರಾಬಾದ್ ಗೆ 6 ಪಂದ್ಯಗಳಿಂದ ಇದುವರೆಗೆ ಕೇವಲ 1 ಗೆಲುವು ಸಿಕ್ಕಿದೆ.

ರಾಜಸ್ಥಾನ್ ಗಿಂತಲೂ ಹೀನಾಯ ಪರಿಸ್ಥಿತಿಯಲ್ಲಿರುವುದು ಹೈದರಾಬಾದ್. ಇದುವರೆಗೆ ಖ್ಯಾತಿಗೆ ತಕ್ಕ ಆಟವಾಡದ ಹೈದರಾಬಾದ್ ಗೆ ಮಾನ ಉಳಿಸಿಕೊಳ್ಳಲು ಉತ್ತಮ ಅವಕಾಶ ಸಿಕ್ಕಿದೆ. ಅದನ್ನು ಯಾವ ರೀತಿ ಬಳಸಿಕೊಳ್ಳುತ್ತದೋ ಕಾದು ನೋಡಬೇಕು. ಈ ಪಂದ್ಯ ಅಪರಾಹ್ನ 3.30 ರಿಂದ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಪೊಲ್ಲಾರ್ಡ್ ಸುನಾಮಿಗೆ ಗೆದ್ದ ಮುಂಬೈ ಇಂಡಿಯನ್ಸ್