Publish Date: Sat, 09 Oct 2021 (12:25 IST)
Updated Date: Sat, 09 Oct 2021 (09:34 IST)
ದುಬೈ: ಐಪಿಎಲ್ 14 ರಲ್ಲಿ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದು ವಿರಾಮದ ದಿನವಾಗಿದೆ. ಇನ್ನು ಪ್ಲೇ ಆಫ್ ಹಂತದ ಪಂದ್ಯಗಳು ಯಾವಾಗ ಆರಂಭವಾಗುತ್ತದೆ ಎಂದು ನೋಡೋಣ.
ಭಾನುವಾರ ಮೊದಲ ಪ್ಲೇ ಆಫ್ ಪಂದ್ಯ ನಡೆಯಲಿದ್ದು, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯವಾಡಲಿದೆ. ಎರಡನೆಯ ಪ್ಲೇ ಆಫ್ ಪಂದ್ಯ ಸೋಮವಾರ ನಡೆಯಲಿದೆ. ಮೂರನೆಯ ಪ್ಲೇ ಆಫ್ ಪಂದ್ಯ ಬುಧವಾರ ನಡೆಯುವುದು.
ಅಂತಿಮವಾಗಿ ಅಕ್ಟೋಬರ್ 15 ರಂದು ಶುಕ್ರವಾರ ಐಪಿಎಲ್ 14 ರ ಫೈನಲ್ ಪಂದ್ಯ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ರಿಂದ ಆರಂಭವಾಗಲಿದೆ.