ದುಬೈ: ಐಪಿಎಲ್ 14 ರಲ್ಲಿ ಇಂದು ಏಕಕಾಲಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಮುಂಬೈ-ಹೈದರಾಬಾದ್ ಜೊತೆಗೆ ಆರ್ ಸಿಬಿ-ಡೆಲ್ಲಿ ಕೂಡಾ ಒಂದೇ ಸಮಯಕ್ಕೆ ಮುಖಾಮುಖಿಯಾಗಲಿದೆ.
ಇದು ಐಪಿಎಲ್ 14 ರ ಕೊನೆಯ ಲೀಗ್ ಪಂದ್ಯವಾಗಿದೆ. ಆರ್ ಸಿಬಿ ಮತ್ತು ಡೆಲ್ಲಿ ಎರಡೂ ತಂಡಗಳೂ ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವುದರಿಂದ ಈ ಪಂದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲ.
ಹಾಗಿದ್ದರೂ ಆರ್ ಸಿಬಿಗೆ ಎಬಿಡಿ ವಿಲಿಯರ್ಸ್ ಫಾರ್ಮ್ ಗೆ ಮರಳುವುದು ಮುಖ್ಯ. ಇದರ ಜೊತೆಗೆ ತನ್ನ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸಲು ಅವಕಾಶ. ಅತ್ತ ಡೆಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬಲಿಷ್ಠವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆರ್ ಸಿಬಿಗೆ ಅಪಾಯ. ಈ ಪಂದ್ಯವೂ 7.30 ಕ್ಕೆ ಆರಂಭವಾಗಲಿದೆ.