Publish Date: Thu, 07 Oct 2021 (16:55 IST)
Updated Date: Thu, 07 Oct 2021 (16:57 IST)
ಚೆನ್ನೈ: ಧೋನಿ ಮುಂದಿನ ಐಪಿಎಲ್ ಆಡುತ್ತಾರಾ? ಈ ಪ್ರಶ್ನೆಗೆ ಇದುವರೆಗೆ ಸಿಎಸ್ ಕೆ ತಂಡ ಮತ್ತು ಧೋನಿ ನಿಕಟವರ್ತಿಗಳು ಉತ್ತರಿಸುತ್ತಿದ್ದರು. ಆದರೀಗ ಸ್ವತಃ ಧೋನಿಯೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಮುಂದಿನ ಐಪಿಎಲ್ ನಲ್ಲಿ ನಾನು ಹಳದಿ ಜೆರ್ಸಿ ತೊಡುತ್ತೇನೆ. ಆದರೆ ಅದು ಆಟಗಾರನಾಗಿಯೇ ಅಥವಾ ಬೇರೆ ರೀತಿಯಲ್ಲಾ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ ಎಂದಿದ್ದಾರೆ.
ಮುಂದಿನ ಐಪಿಎಲ್ ಗೆ ಎರಡು ಹೊಸ ತಂಡಗಳ ಸೇರ್ಪಡೆಯಾಗಲಿದೆ. ಹೀಗಾಗಿ ಆಟಗಾರರನ್ನು ಉಳಿಸುವ ನಿಯಮಗಳಲ್ಲಿ ಬದಲಾವಣೆಯಾಗಬಹುದು. ಸದ್ಯಕ್ಕೆಎಲ್ಲವೂ ಅನಿಶ್ಚಿತತವಾಗಿದೆ. ಏನೇ ಆದರೂ ಎಲ್ಲವೂ ಒಳಿತಾಗಲಿದೆ ಎಂಬ ನಂಬಿಕೆ ಎಂದಿದ್ದಾರೆ. ಕಳೆದ ಎರಡು ದಿನಗಳ ಮೊದಲು ಧೋನಿ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಸಿಎಸ್ ಕೆ ದಿರಿಸಿನಲ್ಲೇ ಆಡುವುದಾಗಿ ಹೇಳಿದ್ದರು.