Publish Date: Fri, 08 Oct 2021 (17:01 IST)
Updated Date: Fri, 08 Oct 2021 (17:04 IST)
ಬೆಂಗಳೂರು: ಕರ್ನಾಟಕ ರಣಜಿ ಆಟಗಾರ ಅಭಿಮನ್ಯು ಮಿಥುನ್ ತಮ್ಮ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.
ಭಾರತ ತಂಡದ ಪರ 4 ಪಂದ್ಯಗಳಿಂದ 9 ವಿಕೆಟ್ ಪಡೆದಿರುವ ಅಭಿಮನ್ಯು ಐಪಿಎಲ್ ನಲ್ಲೂ ವಿವಿಧ ಫ್ರಾಂಚೈಸಿಗಳಲ್ಲಿ ಒಟ್ಟು 16 ಪಂದ್ಯಗಳನ್ನಾಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚು ಅವರು ದಾಖಲೆ ಮಾಡಿರುವುದು ಕರ್ನಾಟಕ ಪರ ರಣಜಿ ಪಂದ್ಯಗಳಲ್ಲಿ. ತಂಡದ ಪ್ರಮುಖ ಬೌಲರ್ ಆಗಿದ್ದ 31 ವರ್ಷದ ಅಭಿಮನ್ಯು ಮಿಥುನ್ 103 ಪ್ರಥಮ ದರ್ಜೆ ಪಂದ್ಯಗಳಿಂದ 338 ವಿಕೆಟ್ ಕಬಳಿಸಿದ್ದಾರೆ. ಇದೀಗ ನಿವೃತ್ತಿ ಘೋಷಿಸುವ ನಿರ್ಧಾರ ಪ್ರಕಟಿಸಿದ್ದಾರೆ.