Select Your Language

Notifications

webdunia
webdunia
webdunia
webdunia

ಐಪಿಎಲ್ 14: ಮುಂಬೈಗೆ ಇಂದು ಕೆಕೆಆರ್ ಸವಾಲು, ರೋಹಿತ್ ಆಗಮನ ಸಾಧ್ಯಿತೆ

ಐಪಿಎಲ್ 14: ಮುಂಬೈಗೆ ಇಂದು ಕೆಕೆಆರ್ ಸವಾಲು, ರೋಹಿತ್ ಆಗಮನ ಸಾಧ್ಯಿತೆ
ದುಬೈ , ಗುರುವಾರ, 23 ಸೆಪ್ಟಂಬರ್ 2021 (09:00 IST)
ದುಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ.


ಚೆನ್ನೈ ವಿರುದ್ಧ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಗೈರಾಗಿದ್ದರು. ಈ ಪಂದ್ಯವನ್ನು ಮುಂಬೈ ಸೋತಿತ್ತು. ಹೀಗಾಗಿ ಪಂದ್ಯಕ್ಕೆ ರೋಹಿತ್ ಪುನರಾಗಮನದೊಂದಿಗೆ ತಂಡ ಹೊಸ ಉತ್ಸಾಹದಿಂದ ಕಣಕ್ಕಿಳಿಯಲಿದೆ.

ಅತ್ತ ಕೆಕೆಆರ್ ಮೊದಲ ಪಂದ್ಯದಲ್ಲಿ ಆರ್ ಸಿಬಿಯನ್ನು ಹೀನಾಯವಾಗಿ ಸೋಲಿಸಿದ ಉತ್ಸಾಹದಲ್ಲಿದೆ. ಶುಬ್ನಂ ಗಿಲ್ ಉತ್ತಮ ಲಯದಲ್ಲಿದ್ದಾರೆ. ಪ್ರಸಿದ್ಧ ಕೃಷ್ಣ, ವರುಣ್ ಚಕ್ರವರ್ತಿಯನ್ನೊಳಗೊಂಡ ಬೌಲಿಂಗ್ ಪಡೆ ಸಶಕ್ತವಾಗಿದೆ. ಹೀಗಾಗಿ ಇಂದು ಜಿದ್ದಾಜಿದ್ದಿನ ಪಂದ್ಯ ನಿರೀಕ್ಷಿಸಬಹುದು. ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಆರೆಂಜ್ ಕ್ಯಾಪ್ ಉಳಿಸಿಕೊಂಡ ಶಿಖರ್ ಧವನ್