Select Your Language

Notifications

webdunia
webdunia
webdunia
Saturday, 15 March 2025
webdunia

ಐಪಿಎಲ್ 14: ಡೆಲ್ಲಿ-ಸಿಎಸ್ ಕೆ ಮೊದಲ ಪ್ಲೇ ಆಫ್ ಹಣಾಹಣಿ

ಐಪಿಎಲ್ 14: ಡೆಲ್ಲಿ-ಸಿಎಸ್ ಕೆ ಮೊದಲ ಪ್ಲೇ ಆಫ್ ಹಣಾಹಣಿ
ದುಬೈ , ಭಾನುವಾರ, 10 ಅಕ್ಟೋಬರ್ 2021 (09:05 IST)
ದುಬೈ: ಐಪಿಎಲ್ 14 ಕೊನೆಯ ಹಂತಕ್ಕೆ ಬಂದಿದ್ದು, ಇಂದಿನಿಂದ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯಲಿವೆ. ಇಂದು ಡೆಲ್ಲಿ ಕ್ಯಾಪಿಟಲ್ಸ್‍ ಮತ್ತು ಸಿಎಸ್ ಕೆ ನಡುವೆ ಮೊದಲ ಪಂದ್ಯ ನಡೆಯಲಿದೆ.

 

ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಆದರೆ ಚೆನ್ನೈಗೆ ಬ್ಯಾಟಿಂಗ್ ಚಿಂತೆಯ ವಿಷಯವಾಗಿದೆ. ಋತುರಾಜ್ ಗಾಯಕ್ ವಾಡ್ ಮತ್ತು ಫಾ ಡು ಪ್ಲೆಸಿಸ್ ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ರನ್ ಬಂದಿಲ್ಲ.

ಇನ್ನು ಡೆಲ್ಲಿಗೆ ಕೊನೆಯ ಲೀಗ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಕೈಕೊಟ್ಟಿದ್ದರು. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ. ಮೊದಲ ಬಾರಿಗೆ ಐಪಿಎಲ್ ಕಿರೀಟ ಗೆಲ್ಲುವ ಅವಕಾಶ ಡೆಲ್ಲಿ ಪಾಲಿಗೆ ಒಲಿದಿದೆ. ಅದನ್ನು ಹೇಗೆ ಬಳಸಿಕೊಳ್ಳುತ್ತದೆ ನೋಡಬೇಕು. ಈ ಪಂದ್ಯ ಸಂಜೆ 7.30 ರಿಂದ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗೆ ವಿದಾಯ ಘೋಷಿಸಿದ ಡೇವಿಡ್ ವಾರ್ನರ್