Publish Date: Sat, 09 Oct 2021 (17:42 IST)
Updated Date: Sat, 09 Oct 2021 (17:44 IST)
ದುಬೈ: ಆಸ್ಟ್ರೇಲಿಯಾ ಮೂಲದ ಸನ್ ರೈಸರ್ಸ್ ತಂಡದ ಆಟಗಾರ ಡೇವಿಡ್ ವಾರ್ನರ್ ಐಪಿಎಲ್ 2021 ಕ್ಕೆ ಗುಡ್ ಬೈ ಹೇಳಿದ್ದಾರೆ.
ಈ ಬಾರಿ ಅವರನ್ನು ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಅರ್ಧದಲ್ಲೇ ಕೈಬಿಡಲಾಗಿತ್ತು. ಇದರಿಂದಾಗಿ ಅವರಿಗೆ ತಂಡದ ಜೊತೆ ಮೈದಾನಕ್ಕೆ ಪ್ರವೇಶಿಸಲೂ ಅವಕಾಶ ನೀಡಲಾಗಿರಲಿಲ್ಲ. ಒಂದು ಪಂದ್ಯದಲ್ಲಿ ಸಾಮಾನ್ಯ ಪ್ರೇಕ್ಷಕರಂತೇ ಮೈದಾನಕ್ಕೆ ಬಂದು ತಂಡದ ಬಾವುಟ ಹಾರಿಸಿ ಪಂದ್ಯ ವೀಕ್ಷಿಸಿದ್ದರು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೈದರಾಬಾದ್ ಜೆರ್ಸಿ ತೊಟ್ಟ ಫೋಟೋ ಪ್ರಕಟಿಸಿ ನಿಮ್ಮಲ್ಲರನ್ನೂ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ. ಬಹುಶಃ ಅವರು ಮುಂದಿನ ಆವೃತ್ತಿಗೆ ಬೇರೆ ಫ್ರಾಂಚೈಸಿಗಾಗಿಯೂ ಆಡುತ್ತಾರಾ ಎನ್ನುವುದು ಇನ್ನೂ ಖಚಿತವಾಗಿಲ್ಲ.