Select Your Language

Notifications

webdunia
webdunia
webdunia
Sunday, 13 April 2025
webdunia

ಐಪಿಎಲ್ ನಲ್ಲಿ ಹರಾಜಾಗಲು 1097 ಆಟಗಾರರ ನೋಂದಣಿ

ಐಪಿಎಲ್ 14
ಮುಂಬೈ , ಶನಿವಾರ, 6 ಫೆಬ್ರವರಿ 2021 (10:28 IST)
ಮುಂಬೈ: ಅತ್ಯಂತ ಶ್ರೀಮಂತ ಕ್ರೀಡಾಕೂಟವೆಂದೇ ಕರೆಯಿಸಿಕೊಳ್ಳುವ ಐಪಿಎಲ್ ನಲ್ಲಿ ಹರಾಜಾಗಲು ಆಟಗಾರರು ತುದಿಗಾಲಲ್ಲಿ ನಿಂತಿರುತ್ತಾರೆ. ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರೋಬ್ಬರಿ 1097 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ.


ವಿದೇಶೀ ಆಟಗಾರರ ಪೈಕಿ ಹೆಚ್ಚಿನವರು ವೆಸ್ಟ್ ಇಂಡೀಸ್ ಮೂಲದವರು ಎನ್ನುವುದು ವಿಶೇಷ.  ಈ ಆಟಗಾರರ ಪಟ್ಟಿಯನ್ನು ಪರಿಷ್ಕರಿಸಿ ಬಿಸಿಸಿಐ ಅಂತಿಮ ಪಟ್ಟಿ ಹೊರಬಿಡಲಿದೆ. ಇವರಲ್ಲಿ ಭಾರತೀಯ ಆಟಗಾರರು 814 ಮಂದಿಯಿದ್ದರೆ, ವಿದೇಶೀಯರು 283 ಆಟಗಾರರಿದ್ದಾರೆ. ಸ್ಪಾಟ್ ಫಿಕ್ಸಿಂಗ್ ನಿಷೇಧ  ಶಿಕ್ಷೆ ಮುಗಿಸಿ ಕ್ರಿಕೆಟ್ ಗೆ ಮರಳಿರುವ ಕೇರಳದ ವೇಗಿ ಶ್ರೀಶಾಂತ್ ಕೂಡಾ ಪಟ್ಟಿಯಲ್ಲಿದ್ದಾರೆ. ಫೆಬ್ರವರಿ 18 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕನಾಗಿ ಮೊದಲ ಟೆಸ್ಟ್ ಬಳಿಕ ವಿರಾಟ್ ಕೊಹ್ಲಿಗೆ ಈ ಅನುಭವ ಆಗಿದ್ದು ಇದೇ ಮೊದಲು