Publish Date: Sat, 06 Feb 2021 (08:58 IST)
Updated Date: Sat, 06 Feb 2021 (08:59 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬೌಲರ್ ಗಳು ವಿಕೆಟ್ ಕೀಳಲು ವಿಫಲರಾದ ಬಳಿಕ ಟ್ವಿಟರಿಗರು ರವೀಂದ್ರ ಜಡೇಜಾರನ್ನು ನೆನೆಸಿಕೊಂಡಿದ್ದಾರೆ.
ಮೂರನೇ ಸ್ಪಿನ್ನರ್ ಆಗಿ ಕಣಕ್ಕಿಳಿದ ಶಹಬಾಜ್ ನದೀಂ ಅಂತೂ ಎದುರಾಳಿಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ಜಡೇಜಾರನ್ನು ನೆನೆಸಿಕೊಂಡ ಟ್ವಿಟರಿಗರು, ಇಂತಹ ಸಂದರ್ಭದಲ್ಲಿ ಅವರಿದ್ದಿದ್ದರೆ ಜೋ ರೂಟ್-ಸಿಬ್ಲೆ ಪಾರ್ಟನರ್ ಶಿಪ್ ಮುರಿಯುತ್ತಿದ್ದರು. ಕನಿಷ್ಠ ಪಕ್ಷ ಜಡೇಜಾ ಇಲ್ಲದೇ ಇದ್ದಾಗ ಕುಲದೀಪ್ ಯಾದವ್ ಗಾದರೂ ಆಡುವ ಬಳಗದಲ್ಲಿ ಸ್ಥಾನ ನೀಡಬಹುದಿತ್ತು ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.