Publish Date: Fri, 05 Feb 2021 (09:33 IST)
Updated Date: Fri, 05 Feb 2021 (09:38 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭವಾಗುವ ಟೆಸ್ಟ್ ಪಂದ್ಯದೊಂದಿಗೆ ಬರೋಬ್ಬರಿ 330 ದಿನಗಳ ಬಳಿಕ ಭಾರತೀಯ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆರಂಭವಾಗುತ್ತಿದೆ.
ಕೊರೋನಾ, ಲಾಕ್ ಡೌನ್ ನಿಂದಾಗಿ ಕ್ರಿಕೆಟ್ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿತ್ತು. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟೂರ್ನಿ ನಡೆದಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಿಕೆಟ್ ಟೂರ್ನಿ ನಡೆದಿರಲಿಲ್ಲ. ಈಗ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ದ್ವಿತೀಯ ಪಂದ್ಯದ ಬಳಿಕ ಪ್ರೇಕ್ಷಕರಿಗೂ ಮೈದಾನಕ್ಕೆ ಪ್ರವೇಶ ಸಿಗಲಿದೆ. ಇದರೊಂದಿಗೆ ಕೊರೋನಾ ಬಳಿಕ ಕ್ರಿಕೆಟ್ ನ ಹೊಸ ಶಕೆ ಆರಂಭವಾಗುತ್ತಿದೆ.