Publish Date: Fri, 05 Feb 2021 (11:40 IST)
Updated Date: Fri, 05 Feb 2021 (11:42 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಊಟದ ವಿರಾಮದ ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ.
ಆರಂಭಿಕ ವಿಕೆಟ್ ಗೆ ಎಚ್ಚರಿಕೆಯ ಆಟವಾಡಿದ ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲೆ 63 ರನ್ ಕಲೆ ಹಾಕಿದರು. ಈ ವೇಳೆ ಭಾರತ ವಿಕೆಟ್ ಸಿಗದೇ ಪರದಾಡಿತು. ಆದರೆ ಈ ಹಂತದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರೋರಿ ವಿಕೆಟ್ ಕಬಳಿಸಿದರು. ಆಗ ಅವರು 33 ರನ್ ಗಳಿಸಿದ್ದರು. ಇದರಿಂದ ಸ್ಪೂರ್ತಿಗೊಂಡ ವೇಗಿ ಜಸ್ಪ್ರೀತ್ ಬುಮ್ರಾ ಮೂರನೇ ಕ್ರಮಾಂಕದಲ್ಲಿ ಬಂದ ಡೇನಿಯಲ್ ಲಾರೆನ್ಸ್ ರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಗಟ್ಟಿದರು. ಇದರೊಂದಿಗೆ ಊಟದ ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲು ಭಾರತೀಯ ಬೌಲರ್ ಗಳು ಚಾರ್ಜ್ ಆಗಿದ್ದು, ಎದುರಾಳಿಗಳಿಗೆ ಅಪಾಯಕಾರಿಯಾಗುವ ಸೂಚನೆ ಕೊಟ್ಟಿದ್ದಾರೆ. ಇದೀಗ ಕ್ರೀಸ್ ನಲ್ಲಿ 26 ರನ್ ಗಳಿಸಿರುವ ಡೊಮಿನಿಕ್ ಮತ್ತು 4 ರನ್ ಗಳಿಸಿರುವ ಜೋ ರೂಟ್ ಬ್ಯಾಟಿಂಗ್ ಮಾಡುತ್ತಿದ್ದಾರೆ.