Publish Date: Sat, 06 Feb 2021 (09:55 IST)
Updated Date: Sat, 06 Feb 2021 (09:57 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಾಟದಲ್ಲಿ ಕೇವಲ 3 ವಿಕೆಟ್ ಕೀಳಲಷ್ಟೇ ಸಮರ್ಥವಾಗಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಬೇಡದ ದಾಖಲೆಯೊಂದನ್ನು ಮಾಡಿದೆ.
ಮೊದಲ ದಿನದಾಟದಲ್ಲಿ ಮೂರು ಅಥವಾ ಅದಕ್ಕಿಂತ ಕಡಿಮೆ ವಿಕೆಟ್ ಸಂಪಾದಿಸಿದ ದಾಖಲೆಯನ್ನು ಕೊಹ್ಲಿ ನಾಯಕತ್ವದಲ್ಲಿ ಭಾರತ ಇದು ಎರಡನೇ ಬಾರಿಗೆ ಮಾಡಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್ ನಲ್ಲಿ (348/2) ಈ ಕುಖ್ಯಾತಿಗೊಳಗಾಗಿತ್ತು. ಅಂದು ಕೊಹ್ಲಿ ಪೂರ್ಣಪ್ರಮಾಣದ ನಾಯಕರಾದ ಮೊದಲ ಟೆಸ್ಟ್ ಪಂದ್ಯವಾಗಿತ್ತು.