Publish Date: Thu, 13 Aug 2020 (12:49 IST)
Updated Date: Thu, 13 Aug 2020 (12:51 IST)
ದುಬೈ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 13 ಕ್ಕೆ ಮೊದಲು ಕ್ರಿಕೆಟಿಗರು ಕಡ್ಡಾಯವಾಗಿ ಉದ್ದೀಪನಾ ಔಷಧ ಪರೀಕ್ಷೆಗೊಳಗಾಗಲಿದ್ದಾರೆ.
ನಾಡಾ ಹಾಗೂ ಯುಎಇಯ ನಾಡೋ ಸಂಸ್ಥೆ ಜಂಟಿಯಾಗಿ ಆಟಗಾರರಿಗೆ ಡೋಪಿಂಗ್ ಟೆಸ್ಟ್ ನಡೆಸಲಿದೆ. ಕೊರೋನಾ ಭೀತಿಯಿರುವುದರಿಂದ ಡೋಪಿಂಗ್ ಟೆಸ್ಟ್ ಕೂಡಾ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೇ ನಡೆಯಲಿದೆ.
ಭಾರತದ ನಾಡಾ ಸಂಸ್ಥೆ ಯುಎಇಗೆ ಪ್ರತ್ಯೇಕ ತಂಡವನ್ನು ಕಳುಹಿಸಲಿದ್ದು, ಅವರೂ ಕ್ವಾರಂಟೈನ್ ಗೊಳಗಾಗಲಿದ್ದು, ಬಳಿಕ ಆಟಗಾರರ ಪರೀಕ್ಷೆ ನಡೆಸಲಿದ್ದಾರೆ.