Select Your Language

Notifications

webdunia
webdunia
webdunia
webdunia

ಐಪಿಎಲ್‌ನಲ್ಲಿ ಈ ಬಾರಿಯೂ ಧೋನಿ ಕಣಕ್ಕಿಳಿಯುವುದು ಪಕ್ಕಾ: ಭರ್ಜರಿ ತಾಲೀಮು ನಡೆಸಿದ ಫಿನಿಷರ್‌

Indian Premier League, Mahendra Singh Dhoni, Chennai Super Kings

Sampriya

ಚೆನ್ನೈ , ಬುಧವಾರ, 19 ಮಾರ್ಚ್ 2025 (16:41 IST)
Indian Premier League, Mahendra Singh Dhoni, Chennai Super Kings
ಚೆನ್ನೈ: ಇದೇ 22ರಂದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಗೆ ಚಾಲನೆ ದೊರೆಯಲಿದೆ. ಎಲ್ಲಾ ತಂಡಗಳ ಆಟಗಾರರು ಭರ್ಜರಿ ತಾಲೀಮು ನಡೆಸುತ್ತಿದ್ಧಾರೆ. ಈ ಬಾರಿ ಐಪಿಎಲ್‌ನಲ್ಲಿ ಮಹೇಂದ್ರಸಿಂಗ್‌ ಧೋನಿ ಕಣಕ್ಕೆ ಇಳಿಯುತ್ತಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.  

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಲವು ವರ್ಷಗಳ ಹಿಂದೆ ವಿದಾಯ ಘೋಷಿಸಿರುವ 43 ವರ್ಷದ ಧೋನಿ ಇನ್ನೂ ಐಪಿಎಲ್‌ಗೆ ನಿವೃತ್ತಿ ಘೋಷಿಸಿಲ್ಲ. ಅವರು ಈ ಬಾರಿ ಕಣಕ್ಕೆ ಇಳಿಯುತ್ತಾರೆಯೇ, ಇಳಿದರೂ ಯಾವ ಪಾತ್ರ ವಹಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಭಿಮಾನಿಗಳ ಕುತೂಹಲ ತಣಿಸಲು ಅವರ ಪ್ರತಿನಿಧಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಧೋನಿ ಅಭ್ಯಾಸ ಮಾಡುವ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಶ್ರೀಲಂಕಾದ ವೇಗದ ಬೌಲರ್ ಮತೀಶ ಪಥಿರಾಣ ಎಸೆತದಲ್ಲಿಧೋನಿ ತಮ್ಮ ವಿಶಿಷ್ಟ ಹೆಲಿಕಾಪ್ಟರ್ ಹೊಡೆತದ ಮೂಲಕ ಗಮನ ಸೆಳೆದಿದ್ದಾರೆ. ಇದು ಅಭ್ಯಾಸದ ವಿಡಿಯೊ ಆಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಬಾರಿಯೂ ಧೋನಿ ಫಿನಿಷಿಂಗ್‌ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.  ಮೆಗಾ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ₹4 ಕೋಟಿಗೆ ತನ್ನ ಬಳಿಯೇ ಉಳಿಸಿಕೊಂಡಿತ್ತು.

ಮಾರ್ಚ್ 23ರಂದು ಚೆನ್ನೈ ಸೂಪರ್ ಕಿಂಗ್ಸ್, ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸವಾಲನ್ನು ಎದುರಿಸಲಿದೆ. ಎಂ.ಚಿದಂಬರಂ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಧೋನಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಚೆನ್ನೈ ತಂಡದ ನಾಯಕತ್ವವನ್ನು ಋತುರಾಜ್ ಗಾಯಕವಾಡ್ ಅವರಿಗೆ ಹಸ್ತಾಂತರಿಸಿರುವ ಧೋನಿ, ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಮುಂದುವರಿದಿದ್ದಾರೆ.


 

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಆರ್ ಸಿಬಿ ಪಂದ್ಯಗಳ ಟಿಕೆಟ್ ಬೆಲೆ ಬಲು ದುಬಾರಿ: ಬುಕಿಂಗ್ ಎಲ್ಲಿ ಮಾಡಬೇಕು ನೋಡಿ