ನವದೆಹಲಿ: ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಲ್ಲಿಂದ ಆಸ್ಟ್ರೇಲಿಯಾಗೆ ತೆರಳುವ ಎಲ್ಲಾ ವಿಮಾನಗಳನ್ನು ಅಲ್ಲಿನ ಸರ್ಕಾರ ತಕ್ಷಣದಿಂದಲೇ ಜಾರಿಯಾಗುವಂತೆ ರದ್ದುಗೊಳಿಸಿದೆ.
ಈ ನಡುವೆ ಭಾರತದಲ್ಲಿ ಐಪಿಎಲ್ ಆಡುತ್ತಿರುವ ಆಸ್ಟ್ರೇಲಿಯನ್ ಕ್ರಿಕೆಟಿಗರಿಗೆ ನಿಮ್ಮ ದಾರಿ ನೀವೇ ನೋಡಿಕೊಳ್ಳಿ ಎಂದು ಪ್ರಧಾನಿ ಸ್ಕಾಟ್ ಮೋರಿಸನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟಿಗರು ಖಾಸಗಿಯಾಗಿ ಅಲ್ಲಿಗೆ ತೆರಳಿದ್ದಾರೆ. ಇದು ಆಸ್ಟ್ರೇಲಿಯಾ ಪ್ರವಾಸದ ಭಾಗವಲ್ಲ. ಹೀಗಾಗಿ ಅವರು ಆಸ್ಟ್ರೇಲಿಯಾಗೆ ಮರಳಲು ಅವರದೇ ದಾರಿಯನ್ನು ನೋಡಿಕೊಳ್ಳಬೇಕು. ನಾವೇನೂ ಮಾಡಲಾಗದು ಎಂದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಇಲ್ಲಿ ಉಳಿದುಕೊಳ್ಳುವುದರ ಜೊತೆಗೆ ತವರಿಗೆ ಮರಳುವ ತಲೆಬಿಸಿ ಶುರುವಾಗಿದೆ.