Publish Date: Mon, 26 Oct 2020 (10:10 IST)
Updated Date: Mon, 26 Oct 2020 (10:12 IST)
ಮುಂಬೈ: ಐಪಿಎಲ್ 13 ರಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್, ಶಬ್ನಂ ಗಿಲ್, ಪ್ರಸಿದ್ಧ ಕೃಷ್ಣ ಈಗ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.
ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು, ಸೀಮಿತ ಓವರ್ ಗಳ ತಂಡದಲ್ಲಿ ಐಪಿಎಲ್ ನ ಈ ಸ್ಟಾರ್ ಆಟಗಾರರಿಗೆ ಸ್ಥಾನ ನೀಡಲು ಆಯ್ಕೆಗಾರರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಭಾರತಕ್ಕೆ ಈಗ ಉತ್ತಮ ಫಿನಿಶರ್ ನ ಅಗತ್ಯವಿದೆ. ಹೀಗಾಗಿ ಈ ಸ್ಥಾನವನ್ನು ಯುವ ಆಟಗಾರರಾದ ಶಬ್ನಂ ಗಿಲ್ ಅಥವಾ ಸೂರ್ಯ ಕುಮಾರ್ ಯಾದವ್ ತುಂಬಬಹುದು ಎಂಬುದು ಆಯ್ಕೆಗಾರರ ಲೆಕ್ಕಾಚಾರ. ಭವಿಷ್ಯದ ದೃಷ್ಟಿಯಿಂದ ಪ್ರಸಿದ್ಧ ಕೃಷ್ಣ ಅವರಂತಹ ಯುವ ಬೌಲರ್ ಗಳಿಗೆ ಅವಕಾಶ ನೀಡುವ ಸಾಧ‍್ಯತೆಯಿದೆ. ಹೀಗಾಗಿ ಈ ಐಪಿಎಲ್ ನ ಪ್ರದರ್ಶನ ಯುವ ಆಟಗಾರರಿಗೆ ಜಾಕ್ ಪಾಟ್ ಆಗಲಿದೆ.