ಮುಂಬೈ: ಐಪಿಎಲ್ ನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಬಿಸಿಸಿಐ ಮುಂದಿನ ಆವೃತ್ತಿಗೆ ಎರಡು ಹೊಸ ತಂಡಗಳನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆಸಿದೆ. ಇದಕ್ಕೆ ಎನ್ ಸಿಎ ನಿರ್ದೇಶಕರಾಗಿರುವ ವಾಲ್ ರಾಹುಲ್ ದ್ರಾವಿಡ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ಹಲವು ಯುವ ಪ್ರತಿಭೆಗಳಿವೆ. ಐಪಿಎಲ್ ತಂಡಗಳನ್ನು ಹೆಚ್ಚಿಸುವುದರಿಂದ ಈ ಯುವ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಸಿಕ್ಕಂತಾಗುತ್ತದೆ. ಇದರಿಂದ ಅವರ ಭವಿಷ್ಯದ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಮೊದಲೆಲ್ಲಾ ಯವ ಆಟಗಾರರು ರಣಜಿ, ದೇಶೀಯ ಕ್ರಿಕೆಟ್ ಟೂರ್ನಿಗಳನ್ನೇ ನಂಬಿ ಕೂರಬೇಕಾಗಿತ್ತು. ಆದರೆ ಈಗ ಐಪಿಎಲ್ ನಿಂದಾಗಿ ಅವರ ಅವಕಾಶಗಳು ಹೆಚ್ಚಿವೆ ಎಂಬುದು ದ್ರಾವಿಡ್ ಅಭಿಪ್ರಾಯ.