Select Your Language

Notifications

webdunia
webdunia
webdunia
webdunia

ಸಚಿನ್ ಗೆ ಶೇಕ್ ಹ್ಯಾಂಡ್ ಮಾಡಿದ ಬಳಿಕ ಯುವರಾಜ್ ಸಿಂಗ್ ಸ್ನಾನವೇ ಮಾಡಿರಲಿಲ್ಲವಂತೆ!

ಸಚಿನ್ ಗೆ ಶೇಕ್ ಹ್ಯಾಂಡ್ ಮಾಡಿದ ಬಳಿಕ ಯುವರಾಜ್ ಸಿಂಗ್ ಸ್ನಾನವೇ ಮಾಡಿರಲಿಲ್ಲವಂತೆ!
ಮುಂಬೈ , ಶನಿವಾರ, 14 ನವೆಂಬರ್ 2020 (10:40 IST)
ಮುಂಬೈ: ಸಚಿನ್ ತೆಂಡುಲ್ಕರ್ ಎಂದರೆ ಆರಾಧಿಸುವ ಎಷ್ಟೋ ಅಭಿಮಾನಿಗಳ ಪೈಕಿ ಯುವರಾಜ್ ಸಿಂಗ್ ಕೂಡಾ ಒಬ್ಬರು. ಸಚಿನ್ ಗೆ ಆಪ್ತರಾಗಿರುವ ಯುವಿ ಒಂದು ಕಾಲದಲ್ಲಿ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.


‘2000 ರಲ್ಲಿ ನಾನು ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದೆ. ಟೀಂ ಇಂಡಿಯಾ ಬಸ್ ಗೆ ಏರಿದಾಗ ಮೊದಲ ಬಾರಿಗೆ ನನ್ನ ರೋಲ್ ಮಾಡೆಲ್ ಸಚಿನ್ ತೆಂಡುಲ್ಕರ್ ರನ್ನು ಭೇಟಿಯಾಗಿದ್ದೆ. ಆಗ ಅವರು ನನ್ನ ಕೈಕುಲುಕಿದ್ದರು. ಅದಾದ ಬಳಿಕ ನಾನು ಸ್ನಾನವನ್ನೂ ಮಾಡಲು ಇಷ್ಟಪಡಲಿಲ್ಲ. ಅವರು ಕುಲುಕಿದ ಕೈಯಿಂದ ಮೈಯಿಡೀ ಒರೆಸಿಕೊಂಡಿದ್ದೆ’ ಎಂದು ಯುವಿ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬಾರಿ ವಾಚು ಸಾಗಣೆ ಆರೋಪ: ಕ್ರಿಕೆಟಿಗ ಕೃನಾಲ್ ಪಾಂಡ್ಯಗೆ ಇನ್ನಷ್ಟು ಡ್ರಿಲ್