Select Your Language

Notifications

webdunia
webdunia
webdunia
webdunia

ಅಮ್ಮನ ಅಡುಗೆ ನನ್ನ ಸಿಕ್ಸರ್ ಗಳ ಗುಟ್ಟು ಎಂದ ಮುಂಬೈ ಕ್ರಿಕೆಟಿಗ ಇಶಾನ್ ಕಿಶನ್

ಅಮ್ಮನ ಅಡುಗೆ ನನ್ನ ಸಿಕ್ಸರ್ ಗಳ ಗುಟ್ಟು ಎಂದ ಮುಂಬೈ ಕ್ರಿಕೆಟಿಗ ಇಶಾನ್ ಕಿಶನ್
ದುಬೈ , ಭಾನುವಾರ, 1 ನವೆಂಬರ್ 2020 (10:03 IST)
ದುಬೈ: ಐಪಿಎಲ್ 13 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಗ್ಗು ಬಡಿಯಲು ಮುಂಬೈ ಇಂಡಿಯನ್ಸ್ ಗೆ ಸಹಾಯ ಮಾಡಿದ ಯುವ ಕ್ರಿಕೆಟಿಗ ಇಶಾನ್ ಕಿಶನ್ ತನ್ನ ಈ ಹೊಡೆಬಡಿಯ ಹೊಡೆತಗಳಿಗೆ ಅಮ್ಮನ ಕೈಯಡುಗೆಯೇ ಕಾರಣ ಎಂದಿದ್ದಾರೆ.


ನಿನ್ನೆಯ ಪಂದ್ಯದಲ್ಲಿ 47 ಎಸೆತಗಳಲ್ಲಿ 72 ರನ್ ಚಚ್ಚಿದ ಇಶಾನ್ 3 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಈ ಭರ್ಜರಿ ಇನಿಂಗ್ಸ್ ಬಳಿಕ ಮಾತನಾಡಿರುವ ಅವರು ತಮ್ಮ ಫಿಟ್ನೆಸ್ ಕ್ರೆಡಿಟ್ ಅಮ್ಮನಿಗೆ ಸಲ್ಲಬೇಕು ಎಂದಿದ್ದಾರೆ. ‘ಎಲ್ಲಾ ಕ್ರೆಡಿಟ್ ಅಮ್ಮನಿಗೆ ಸಲ್ಲಬೇಕು. ಅವಳ ಕೈ ಅಡುಗೆ ಕಾರಣ. ಭಾರೀ ಸಿಕ್ಸರ್ ಬಾರಿಸಲು ಎಲ್ಲಿಂದ ಶಕ್ತಿ ಬರುತ್ತದೆ ಎಂದು ನನಗೇ ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಇದೆಲ್ಲವೂ ಅಭ್ಯಾಸ, ಕಠಿಣ ಪರಿಶ್ರಮದ ಫಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ವಿಶ್ ಮಾಡಿದ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ಹುಡುಗರು