Publish Date: Sun, 01 Nov 2020 (09:27 IST)
Updated Date: Sun, 01 Nov 2020 (09:28 IST)
ದುಬೈ: ಐಪಿಎಲ್ ವಿಚಾರಕ್ಕೆ ಬಂದರೆ ನಾನು ಪಕ್ಕಾ ಬೆಂಗಳೂರು ಬಾಯ್. ಹೀಗೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ನಿನ್ನೆಯ ಪಂದ್ಯ ಸೋತಿರುವ ಆರ್ ಸಿಬಿ ಈಗ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಡೆಲ್ಲಿ ವಿರಾಟ್ ಕೊಹ್ಲಿಯ ತವರೂರು. ಹೀಗಾಗಿ ತವರಿನ ತಂಡದ ವಿರುದ್ಧ ಆಡುವ ಬಗ್ಗೆ ಅವರನ್ನು ಸಂದರ್ಶನದಲ್ಲಿ ಪ್ರಶ್ನಿಸಿದಾಗ ಐಪಿಎಲ್ ವಿಚಾರಕ್ಕೆ ಬಂದರೆ ನಾನು ಪಕ್ಕಾ ಬೆಂಗಳೂರು ಹುಡುಗ. ಡೆಲ್ಲಿ ಕಡೆಗೆ ನಾನು ವಾಲಲ್ಲ. ಮುಂದಿನ ಪಂದ್ಯದಲ್ಲಿ ಸ್ಪೋಟಕ ಆಟವಾಡುತ್ತೇವೆ ಎಂದಿದ್ದಾರೆ.