Publish Date: Sat, 31 Oct 2020 (10:21 IST)
Updated Date: Sat, 31 Oct 2020 (10:22 IST)
ದುಬೈ: ಐಪಿಎಲ್ 13 ರಲ್ಲಿ ನಿನ್ನೆಯ ಪಂದ್ಯ ಸೋತ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಪಡೆ ಈಗ ಪ್ಲೇ ಆಫ್ ಹಂತಕ್ಕೇರಲು ಬೇರೆ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರ ಹಾಕಬೇಕಾಗಿದೆ.
14 ಅಂಕಗಳೊಂದಿಗೆ ಪಂಜಾಬ್ ಈಗಲೂ ನಾಲ್ಕನೇ ಸ್ಥಾನದಲ್ಲಿದೆ.ಹಾಗಿದ್ದರೂ ನಾಲ್ಕನೇ ತಂಡವಾಗಿ ಪಂಜಾಬ್ ಪ್ಲೇ ಆಫ್ ಹಂತಕ್ಕೇರಬಹುದಾಗಿದೆ. ಆದರೆ ಅದಕ್ಕ ಪಂಜಾಬ್ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಸಿಎಸ್ ಕೆ ವಿರುದ್ಧ ಗೆಲ್ಲಬೇಕು. ರಾಜಸ್ಥಾನ್ ಮತ್ತು ಕೆಕೆಆರ್ ಕೂಡಾ 14 ಅಂಕ ಹೊಂದಿದೆ. ಈ ಎರಡೂ ತಂಡಗಳು ನಾಳೆ ಮುಖಾ ಮುಖಿಯಾಗಲಿದೆ. ಇವರಲ್ಲಿ ಯಾರೇ ಸೋತರೂ ಅವರ ಪ್ಲೇ ಆಫ್ ಕನಸು ಭಗ್ನವಾಗಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ಆರ್ ಸಿಬಿ ವಿರುದ್ಧ ಸೋತು, ಮುಂದಿನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನೂ ಸೋತರೆ ಪಂಜಾಬ್ ಪ್ಲೇ ಆಫ್ ಕನಸು ಜೀವಂತವಾಗಲಿದೆ.